ಕರ್ನಾಟಕ

karnataka

ETV Bharat / city

ನೆರೆಗೆ ತತ್ತರಿಸಿರುವ ಪೋಷಕರ ಸ್ಥಿತಿಗೆ ಮರುಗುತ್ತಿರುವ ಸಿದ್ಧಗಂಗಾ ಮಠದ ವಿದ್ಯಾರ್ಥಿಗಳು - ತುಮಕೂರಿನ ಸಿದ್ಧಗಂಗಾ ಮಠ

ಉತ್ತರ ಕರ್ನಾಟಕ ಭಾಗದ ಸಾವಿರಾರು ಮಕ್ಕಳು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಊರಿಗೆ ಕಳುಹಿಸಬೇಡಿ. ಇಲ್ಲಿ ನೆರೆಹಾವಳಿಯಿಂದ ಸಾಕಷ್ಟು ತೊಂದರೆಗಳು ಆಗಿವೆ ಎಂಬ ಮಾಹಿತಿಯನ್ನು ಮಠಕ್ಕೆ ಪೋಷಕರು ಈಗಾಗಲೇ ತಿಳಿಸಿದ್ದಾರೆ. ಆದ್ರೆ ಮಕ್ಕಳು ತಮ್ಮ ಪೋಷಕರ ಬಳಿ ಹೋಗಲು ಕಾತರರಾಗಿದ್ದಾರೆ.

ಪೋಷಕರ ಸ್ಥಿತಿಗೆ ಮರುಗುತ್ತಿರುವ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು

By

Published : Aug 14, 2019, 3:08 PM IST

ತುಮಕೂರು:ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಯಿಂದ ತತ್ತರಿಸಿರುವ ತಮ್ಮ ಪೋಷಕರ ಸ್ಥಿತಿಗತಿ ಅರಿಯಲು ಸಿದ್ಧಗಂಗಾ ಮಠದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಹಾತೊರೆಯುತ್ತಿದ್ದಾರೆ.

ಹೀಗಾಗಿ ನಿತ್ಯ ಮಠದ ಸಮೀಪ ಇರುವ ಅಂಗಡಿಗಳಲ್ಲಿನ ಕಾಯಿನ್​ ಬೂತ್​ಗಳಲ್ಲಿ ನಾಮುಂದು, ತಾಮುಂದು ಎಂದು ತಮ್ಮ ಪೋಷಕರ ಮೊಬೈಲ್​ಗಳಿಗೆ ಸಂಪರ್ಕಿಸಲು ಯತ್ನಿಸುತ್ತಿದ್ದಾರೆ. ಕೆಲ ಮಕ್ಕಳಿಗೆ ತಮ್ಮ ಪೋಷಕರ ಮೊಬೈಲ್ ನೆಟ್ವರ್ಕ್ ಲಭ್ಯವಾಗಿ ಅವರ ಪರಿಸ್ಥಿತಿಯನ್ನು ಕೇಳಿ ಮಮ್ಮಲ ಮರುಗಿದರೆ, ಇನ್ನೂ ಕೆಲ ಮಕ್ಕಳು ಮೊಬೈಲ್ ಸಂಪರ್ಕ ಸಾಧ್ಯವಾಗದೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಪೋಷಕರ ಸ್ಥಿತಿಗೆ ಮರುಗುತ್ತಿರುವ ಸಿದ್ದಗಂಗಾ ಮಠದ ವಿದ್ಯಾರ್ಥಿಗಳು

ಉತ್ತರ ಕರ್ನಾಟಕ ಭಾಗದ ಸಾವಿರಾರು ಮಕ್ಕಳು ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳನ್ನು ಊರಿಗೆ ಕಳುಹಿಸಬೇಡಿ. ಇಲ್ಲಿ ನೆರೆಹಾವಳಿಯಿಂದ ಸಾಕಷ್ಟು ತೊಂದರೆಗಳು ಆಗಿವೆ ಎಂಬ ಮಾಹಿತಿಯನ್ನು ಮಠಕ್ಕೆ ಪೋಷಕರು ಈಗಾಗಲೇ ತಿಳಿಸಿದ್ದಾರೆ.

ABOUT THE AUTHOR

...view details