ತುಮಕೂರು: ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯಗಳು ಸರ್ವೆ ಸಾಮಾನ್ಯವಾಗಿವೆ.
ಸ್ಮಾರ್ಟ್ಸಿಟಿ ವತಿಯಿಂದ ಸಾಲು ಸಾಲಾಗಿರುವ ಆಲದ ಮರದ ಸಮೀಪ ಸುಸಜ್ಜಿತವಾದ ಬೆಂಚು ಮತ್ತು ಉದ್ಯಾನದ ರೂಪದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೇ ಬಂಡವಾಳಗಿಸಿಕೊಂಡಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳು ರೋಮ್ಯಾನ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ.
ತುಮಕೂರಿನ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳ ರೋಮ್ಯಾನ್ಸ್ ಓದಿ:ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದ ಎಸ್ಐಟಿ: ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ ತನಿಖಾ ದಳ
ಬಿಎಚ್ ರಸ್ತೆ ಹೊಂದಿಕೊಂಡಂತೆ ಇರುವ ಈ ಉದ್ಯಾನದಲ್ಲಿ ಸದಾ ಜನಜಂಗುಳಿ ಇದ್ದರೂ ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವುದು ಅಸಹ್ಯ ಹುಟ್ಟಿಸುತ್ತಿದೆ. ಸಾರ್ವಜನಿಕರು ಈ ಮಾರ್ಗದಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಆಡಳಿತ ಮಂಡಳಿ ಯಾವರೀತಿ ಕ್ರಮಕೈಗೊಳ್ಳುತ್ತೆ ಎಂಬುದು ಕಾದು ನೋಡ್ಬೇಕಾಗಿದೆ.