ತುಮಕೂರು: ಕೆಲಸದ ಸಮಯ ಹೊರತು ಪಡಿಸಿ ಉಚಿತವಾಗಿ ಸಾರ್ವಜನಿಕ ವೈದ್ಯಕೀಯ ಸೇವೆ ಮಾಡಲು ಸರ್ಕಾರಿ ವೈದ್ಯರಿಗೆ ಅವಕಾಶವಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಖಾಸಗಿ ಕ್ಲಿನಿಕ್ ನಡೆಸುವ ಸರ್ಕಾರಿ ವೈದ್ಯರ ವಿರುದ್ಧ ಕಠಿಣ ಕ್ರಮ: ಶ್ರೀರಾಮುಲು - ತುಮಕೂರು ಆರೋಗ್ಯ ಸಚಿವ ಶ್ರೀರಾಮುಲು ನ್ಯೂಸ್
ಕೆಲಸದ ಸಮಯ ಹೊರತು ಪಡಿಸಿ ಉಚಿತವಾಗಿ ಸಾರ್ವಜನಿಕ ವೈದ್ಯಕೀಯ ಸೇವೆ ಮಾಡಲು ಸರ್ಕಾರಿ ವೈದ್ಯರಿಗೆ ಅವಕಾಶವಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ತುರುವೇಕೆರೆ ಪಟ್ಟಣದ ಕಾಡುಸಿದ್ದೇಶ್ವರ ಮಠದ ರಜತಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಖಾಸಗಿ ಕ್ಲಿನಿಕ್ ನಡೆಸುವ ಸರ್ಕಾರಿ ವೈದ್ಯರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ವೈದ್ಯರ ನೇಮಕಾತಿ ಕುರಿತು ಕೆಪಿಎಸ್ಸಿ ರದ್ದು ಮಾಡಿ, ನೇರ ನೇಮಕಾತಿಗೆ ಕ್ರಮ ಕೈಗೊಂಡಿದ್ದೇನೆ. ಮುಂದಿನ ಮೂರು ತಿಂಗಳೊಳಗೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರ ಕೊರತೆ ನೀಗಿಸುತ್ತೇನೆ ಎಂದರು.
ಇನ್ನು ಉಪ ಚುನಾವಣೆಯಲ್ಲಿ 15 ಕ್ಕೆ 15 ಸ್ಥಾನ ಗೆಲ್ಲುತ್ತೇವೆ. ನನಗೆ ಹಲವು ಉಪ ಚುನಾವಣೆಗಳನ್ನ ನಡೆಸಿದ ಅನುಭವವಿದೆ. ಉಪ ಚುನಾವಣೆಗೆಗಳು ಸರ್ಕಾರದ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಸರ್ಕಾರದ ಪರ ಜನರು ಒಲವು ತೋರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.