ತುಮಕೂರು:ಜಿಲ್ಲೆಯಕುಣಿಗಲ್ ತಾಲೂಕಿನ ಜ್ಞಾನಭಾರತಿ ಇಂಗ್ಲಿಷ್ ಶಾಲೆಯ ವಿದ್ಯಾರ್ಥಿ ಜಿ.ಎಂ. ಮಹೇಶ್ಇಂದು ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶದಲ್ಲಿ 625 ಅಂಕಗಳಿಗೆ 624 ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಇಂಗ್ಲಿಷ್ ವಿಷಯದಲ್ಲಿ 99, ಕನ್ನಡದಲ್ಲಿ 125, ಗಣಿತ, ವಿಜ್ಞಾನ, ಹಿಂದಿ, ಸಮಾಜ ವಿಜ್ಞಾನದಲ್ಲಿ ತಲಾ ನೂರು ಅಂಕಗಳನ್ನು ಗಳಿಸಿದ್ದಾನೆ. ಕೊರೊನಾ ಹರಡುವ ಭೀತಿ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿದ್ದ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತಂದೆ-ತಾಯಿಗೆ ಹೆಮ್ಮೆ ತಂದಿದ್ದಾನೆ.
ಕೊರೊನಾ ಸೋಂಕು ಭೀತಿ ನಡುವೆ ಯಾವುದೇ ಆತಂಕಕ್ಕೆ ಒಳಗಾಗಿರಲಿಲ್ಲ. ಬದಲಾಗಿ ಹೆಚ್ಚಿನ ಅಧ್ಯಯನ ಮಾಡಿದ್ದೆ. ದಿನಕ್ಕೆ ಸುಮಾರು 4-5 ಗಂಟೆಗಳ ಸಮಯ ಓದುತ್ತಿದ್ದೆ. ಎಲ್ಲಾ ಪಠ್ಯ ವಿಷಯಗಳಿಗೂ ಸಮಾನವಾಗಿ ಪ್ರಾಮುಖ್ಯತೆ ಕೊಡುತ್ತಿದ್ದೆ ಎಂದು ಜಿ.ಎಂ. ಮಹೇಶ್ ಸಾಧನೆಯ ಹಿಂದಿನ ಪ್ರಯತ್ನವನ್ನು ಬಿಚ್ಚಿಟ್ಟಿದ್ದಾರೆ.
ಎಸ್ಎಸ್ಎಲ್ಸಿ ಟಾಪರ್ ಜಿ.ಎಂ. ಮಹೇಶ್ ಮಾತು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ. ಶಾಲೆಯಲ್ಲಿ ನಿರಂತರವಾಗಿ ಶಿಕ್ಷಕರ ಸಲಹೆಗಳನ್ನು ಪರಿಗಣಿಸುತ್ತಿದ್ದೆ. ಈ ಸಾಧನೆಗೆ ಪ್ರೋತ್ಸಾಹ ನೀಡಿದ ಪೋಷಕರಿಗೆ ಋಣಿಯಾಗಿರುತ್ತೇನೆ ಎಂದು ಮಹೇಶ್ ಸಂತಸ ವ್ಯಕ್ತಪಡಿಸಿದ್ದಾನೆ.