ತುಮಕೂರು:ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಜತೆಗೆ ಕ್ರೀಡೆ ದೈನಂದಿನ ಜೀವನದ ಭಾಗವಾಗಬೇಕು, ಜೊತೆಗೆ ನಿತ್ಯವೂ ವ್ಯಾಯಾಮ, ಯೋಗ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪೋಲಿಸ್ ಮಹಾ ನಿರ್ದೇಶಕರಾದ ಕೆ.ವಿ ಶರತ್ ಚಂದ್ರ ಸಲಹೆ ನೀಡಿದರು.
ಕ್ರೀಡೆ ದೈನಂದಿನ ಜೀವನದ ಭಾಗವಾಗಬೇಕು: ಡಿಐಜಿ ಕೆ.ವಿ ಶರತ್ ಚಂದ್ರ - ಸಿಬ್ಬಂದಿ ವರ್ಗದವರು ಅನೇಕ ರೀತಿಯ ಒತ್ತಡಗಳಿಂದ ಪ್ರತಿನಿತ್ಯವೂ ಕಾರ್ಯ
ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಜತೆಗೆ ಕ್ರೀಡೆ ದೈನಂದಿನ ಜೀವನದ ಭಾಗವಾಗಬೇಕು, ಜೊತೆಗೆ ಪ್ರತಿದಿನವೂ ವ್ಯಾಯಾಮ, ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಪೋಲಿಸ್ ಮಹಾ ನಿರ್ದೇಶಕರಾದ ಕೆ.ವಿ ಶರತ್ ಚಂದ್ರ ಸಲಹೆ ನೀಡಿದರು.
ನಗರದ ಡಿಎಆರ್ ಮೈದಾನದಲ್ಲಿ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರು ಅನೇಕ ರೀತಿಯ ಒತ್ತಡಗಳಿಂದ ನಿತ್ಯವೂ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ಒತ್ತಡಗಳನ್ನು ನಿವಾರಿಸಿಕೊಳ್ಳಲು ಪ್ರತಿವರ್ಷ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಬಹುಮಾನ ಗೆಲ್ಲುವುದು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವುದು ಪ್ರಮುಖ ಪಾತ್ರವಹಿಸುತ್ತದೆ. ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಕ್ರೀಡೆ ದೈನಂದಿನ ಭಾಗವಾಗಬೇಕು ಜೊತೆಗೆ ನಿತ್ಯವೂ ವ್ಯಾಯಾಮ, ಯೋಗ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಅಭಿವೃದ್ಧಿ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.