ತುಮಕೂರು:ರಾಜ್ಯದ ಕೆಲವೆಡೆ ಬೆಂಬಿಡದೆ ಮಳೆ ಸುರಿಯುತ್ತಿದ್ರೆ, ಇನ್ನೂ ಹಲವೆಡೆ ತೀವ್ರ ಬರಗಾಲವಿದೆ. ಬಿಸಿಲಿನ ಬೇಗೆಗೆ ಬೆಂಡಾದ ಕಲ್ಪತರು ನಾಡಿನ ಜನರು, ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮಳೆಗಾಗಿ ಜಿಲ್ಲೆಯ ಮಧುಗಿರಿ ಪಟ್ಟಣದ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಪರ್ಜನ್ಯ ಹೋಮ ನೆರವೇರಿಸಲಾಯಿತು. ಈ ವೇಳೆ ಪುರೋಹಿತರು ನೀರು ತುಂಬಿದ ಡ್ರಮ್ಗಳಲ್ಲಿ ನಿಂತು ಋಷ್ಯಶೃಂಗ ದೇವರ ಜಪ ಮಾಡಿದರು. 11 ಜನ ಪುರೋಹಿತರು ಮಂತ್ರಗಳನ್ನು ಪಠಿಸಿದರು.