ತುಮಕೂರು:ತಂದೆ ಮತ್ತು ಮಗನ ಮಧ್ಯೆ ನಡೆದ ಗಲಾಟೆಯಲ್ಲಿ ತಂದೆ ಕೊಲೆಯಾಗಿರುವ ಘಟನೆ ತುಮಕೂರು ನಗರದ ಮರಲೂರು ದಿನ್ನೆಯಲ್ಲಿ ನಡೆದಿದೆ. ಆಸಿಫ್ ಉಲ್ಲಾ(57) ಕೊಲೆಯಾದವರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈತನ ಮಗ ಇಮ್ರಾನ್ ಅಸೀಫುಲ್ಲಾ ಮುಖದ ಮೇಲೆ ದಿಂಬಿನಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ.
ತುಮಕೂರು: ತಂದೆ ಮಗನ ಮಧ್ಯೆ ಗಲಾಟೆ ಕೊಲೆಯಲ್ಲಿ ಅಂತ್ಯ! - ತುಮಕೂರು ಲೇಟೆಸ್ಟ್ ಕ್ರೈಂ ನ್ಯೂಸ್
ತಂದೆ ಮಗನ ನಡುವೆ ಆರಂಭವಾದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು
ತಂದೆ ನಿತ್ಯ ಕುಡಿದು ಬಂದು ತಾಯಿ ಮತ್ತು ಇಮ್ರಾನ್ ಜತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದನಂತೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ಗೃಹಿಣಿ ಮಕ್ಕಳೊಂದಿಗೆ ನೇಣಿಗೆ ಶರಣು