ಕರ್ನಾಟಕ

karnataka

ETV Bharat / city

ಇವರ ಕಾಂಗ್ರೆಸ್ ಬುದ್ಧಿ ಸುಟ್ಟರೂ ಹೋಗಲ್ಲ : ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿ - ತುಮಕೂರು ಲೇಟೆಸ್ಟ್ ನ್ಯೂಸ್

ತುಮಕೂರು ನಗರದಲ್ಲಿ 45 ಕಸಾಯಿಖಾನೆ ಇದೆ. ಅದನ್ನು ಮುಚ್ಚಿಸಲು ಪೊಲೀಸರು ಹೋದರೆ ಇವರೇ ತಡೆಯುತ್ತಾರೆ. ಮುಚ್ಚಿಸುವ ಬದಲು ನೋಟಿಸ್ ನೀಡಲು ಹೇಳುತ್ತಾರೆ. ನಮ್ಮಲ್ಲಿ ಪಾಪಿಗಳು ಇದ್ದಾರೆ..

sogadu shivanna
ಮಾಜಿ ಸಚಿವ ಸೊಗಡು ಶಿವಣ್ಣ

By

Published : Oct 29, 2021, 2:35 PM IST

ತುಮಕೂರು: ನಮ್ಮ ಪಕ್ಷದ ಕೆಲ ಜನಪ್ರತಿನಿಧಿಗಳು ಇನ್ನೂ ಕಾಂಗ್ರೆಸ್ ಮನಸ್ಥಿತಿಯಲ್ಲಿಯೇ ಇದ್ದಾರೆ. ಬಿಜೆಪಿಗೆ ಬಂದರೂ ಅವರು ತಮ್ಮ ಮನಸ್ಥಿತಿ ಬದಲಾಯಿಸಿಕೊಂಡಿಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ಸ್ವಪಕ್ಷೀಯರ ವಿರುದ್ಧವೇ ಮಾಜಿ ಸಚಿವ ಸೊಗಡು ಶಿವಣ್ಣ ಆಕ್ರೋಶ ವ್ಯಕ್ತಪಡಿಸಿರುವುದು..

ನಗರದಲ್ಲಿ ಮಾತನಾಡಿದ ಅವರು, ಹಿಂದೂ ಕಾರ್ಯಕರ್ತರ ಬೆಂಬಲಕ್ಕೆ ಇವರುಗಳು ‌ನಿಲ್ಲುತ್ತಿಲ್ಲ. ತುಮಕೂರು ನಗರದಲ್ಲಿ 45 ಕಸಾಯಿಖಾನೆ ಇದೆ. ಅದನ್ನು ಮುಚ್ಚಿಸಲು ಪೊಲೀಸರು ಹೋದರೆ ಇವರೇ ತಡೆಯುತ್ತಾರೆ. ಮುಚ್ಚಿಸುವ ಬದಲು ನೋಟಿಸ್ ನೀಡಲು ಹೇಳುತ್ತಾರೆ. ನಮ್ಮಲ್ಲಿ ಪಾಪಿಗಳು ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಸ್ಥಿತಿ ಗಂಭೀರವಾಗಿದೆ, ಸದ್ಯಕ್ಕೇನೂ ಹೇಳಲಾಗದು: ವಿಕ್ರಂ ಆಸ್ಪತ್ರೆ ವೈದ್ಯರು

ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಆದಾಗ ಸರಿಯಾಗಿ ಸ್ಪಂದಿಸಿಲ್ಲ. ಪಾಲಿಕೆ ಹೆಲ್ತ್ ಇನ್ಸ್​ಪೆಕ್ಟರ್ ಮೂಲಕ ಲಂಚ ಪಡೆಯತ್ತಾರೆ. ಇವರ ಕಾಂಗ್ರೆಸ್ ಬುದ್ಧಿ ಸುಟ್ಟರೂ ಹೋಗಲ್ಲ ಎಂದು ಕಿಡಿ ಕಾರಿದರು.

ABOUT THE AUTHOR

...view details