ತುಮಕೂರು: ಲಾಕ್ಡೌನ್ನಿಂದಾಗಿ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದ ಮಂಗಳಮುಖಿಯರಿಗೆ ಸಮಾಜ ಸೇವಕಿ ಸೌಮ್ಯ ದಂಪತಿ ದಿನಸಿ ಕಿಟ್ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದರು.
ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿದ ಸಮಾಜ ಸೇವಕಿ ಸೌಮ್ಯ ದಂಪತಿ - social worker gave food kit to trigender
ನಿತ್ಯ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಮಂಗಳಮುಖಿಯರು ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ತುಮಕೂರಿನಲ್ಲಿ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ಸ್ಥಳೀಯ ಸಮಾಜ ಸೇವಕಿ ಸೌಮ್ಯ ಮತ್ತು ಅವರ ಪತಿ ದಿನಸಿ ಕಿಟ್ಗಳನ್ನು ವಿತರಿಸಿದರು.
ನಿತ್ಯ ಭಿಕ್ಷಾಟನೆ ಮಾಡಿ ಬದುಕು ಸಾಗಿಸುತ್ತಿದ್ದ ಮಂಗಳಮುಖಿಯರು ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದಾರೆ. ದಾನಿಗಳಿಂದ ನೆರವಿಗಾಗಿ ಹಾತೊರೆಯುತ್ತಿದ್ದಾರೆ. ಹೀಗಾಗಿ ಇವರ ನೆರವಿಗೆ ಬಂದ ಸ್ಥಳೀಯ ಸಮಾಜ ಸೇವಕಿ ಸೌಮ್ಯ ಮತ್ತು ಅವರ ಪತಿ ನಗರದಲ್ಲಿರುವ 50ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಕಿಟ್ಗಳನ್ನು ವಿತರಿಸಿದರು.
ನಗರದ ಕ್ಯಾತಸಂದ್ರ ಟೋಲ್ಗೇಟ್ ಬಳಿ ಅಂಗಡಿಗಳಿಗೆ ತಿರುಗಿ ಭಿಕ್ಷೆ ಬೇಡುತ್ತಿದ್ದು, ನಮಗೆ ಇದೀಗ ಲಾಕ್ಡೌನ್ ಇರುವುದರಿಂದ ಕೈಯಲ್ಲಿ ಹಣವಿಲ್ಲದಂತಾಗಿದೆ. ನಿತ್ಯದ ತುತ್ತಿಗೂ ಪರದಾಡುವಂತಾಗಿದೆ ಎಂದು ಮಂಗಳಮುಖಿಯರು ಕಣ್ಣೀರಿಟ್ಟರು. ಇದೇ ಸಂದರ್ಭದಲ್ಲಿ ಸೌಮ್ಯ ದಂಪತಿಗಳಿಗೆ ಧನ್ಯವಾದ ಸಲ್ಲಿಸಿದರು.