ತುಮಕೂರು :ವಿಶ್ವದಲ್ಲಿಯೇ ಸ್ನೂಪಿಂಗ್ ನಡೆಯುತ್ತಿರುತ್ತದೆ. ಆದ್ರೆ, ಇಷ್ಟು ದೊಡ್ಡ ಮಟ್ಟದಲ್ಲಿ ಫೋನ್ ಕದ್ದಾಲಿಕೆ ನಡೆದಿರುವುದನ್ನು ನಾನು ಕೇಳಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.
ಫೋನ್ ಕದ್ದಾಲಿಕೆ ಕುರಿತು ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ.. ನಗರದಲ್ಲಿ ಮಾತನಾಡಿದ ಅವರು, ಯಾರು ಯಾತಕ್ಕಾಗಿ ಸ್ನೂಪಿಂಗ್ ಮಾಡಿದ್ದಾರೆ ಎಂದು ಬೆಳಕಿಗೆ ಬಂದಿಲ್ಲ. 50 ಸಾವಿರ ಫೋನ್ಗಳನ್ನು ಟ್ಯಾಪ್ ಮಾಡಲಾಗಿದೆ.
ದೇಶದಲ್ಲಿ ಪತ್ರಕರ್ತರು, ವ್ಯಾಪಾರಸ್ಥರು, ರಾಜಕಾರಣಿಗಳ ಫೋನ್ ಕದ್ದಾಲಿಕೆ ಮಾಡಲಾಗಿದೆ. ಯಾಕೆ ಕೇಂದ್ರ ಸರ್ಕಾರ ಇದಕ್ಕೆ ಅವಕಾಶ ನೀಡಿದೆ ಎಂಬುದು ತಿಳಿಯುತ್ತಿಲ್ಲ ಎಂದರು.
ಇಸ್ರೇಲ್ ಮೂಲದ ಸ್ಪೈವೇರ್ ಇದರ ನೇತೃತ್ವ ವಹಿಸಿತ್ತು ಎಂದು ಹೇಳಲಾಗಿದೆ. ಇದು ಸತ್ಯವಾಗಿದೆ. ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.