ತುಮಕೂರು:ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ ಜಿಲ್ಲೆಯ ಸೀಗಲಹಳ್ಳಿ ಗ್ರಾಮಸ್ಥರು ಮಡಿಲಕ್ಕಿ ತುಂಬಿ ಸತ್ಕರಿಸಿದರು.
ಶಿರಾ ಮಿನಿ ಸಮರ: ಜೆಡಿಎಸ್ ಅಭ್ಯರ್ಥಿಗೆ ಮಡಿಲಕ್ಕಿ ನೀಡಿ ಸತ್ಕರಿಸಿದ ಮತದಾರರು - ಶಿರಾ ಉಪಚುನಾವಣೆ ಅಮ್ಮಾಜಮ್ಮಾ
ಶಿರಾ ಉಪ ಚುನಾವಣೆ ಪ್ರತಿಷ್ಠೆಯ ಕಣವಾಗಿದೆ. ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮನವರು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಮ್ಮಾಜಮ್ಮನವರಿಗೆ ಸೀಗಲಹಳ್ಳಿ ಗ್ರಾಮಸ್ಥರು ಮಡಿಲಕ್ಕಿ ತುಂಬಿ ಶುಭ ಹಾರೈಸಿದರು.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ
ಶಿರಾದಲ್ಲಿ ಮತದಾನ ಮಾಡಿದ ನಂತರ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳಿಗೆ ತೆರಳಿ ಮತದಾನ ವೀಕ್ಷಿಸುತ್ತಿರುವ ಅಮ್ಮಾಜಮ್ಮನವರಿಗೆ ಸೀಗಲಹಳ್ಳಿ ಗ್ರಾಮಸ್ಥರು ಉಡುಗರೆಯಾಗಿ ಅರಿಶಿಣ-ಕುಂಕುಮ, ಸೀರೆ ಕೊಟ್ಟು ಮಡಿಲಕ್ಕಿ ತುಂಬಿದ್ದು ವಿಶೇಷವಾಗಿತ್ತು.