ತುಮಕೂರು :ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಹರಡುತ್ತಿದೆ. ಈ ನಡುವೆ ಸರ್ಕಾರಿ ಅಧಿಕಾರಿಗಳ ನೇತೃತ್ವದಲ್ಲಿಯೇ ಸರಳ ಸಾಮೂಹಿಕ ವಿವಾಹ ನಡೆದಿದೆ.
ಕೋವಿಡ್ ನಡುವೆ ದೇವರಾಯನದುರ್ಗದಲ್ಲಿ ಸರಳ ಸಾಮೂಹಿಕ ವಿವಾಹ - mass wedding
ನಾಲ್ಕು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕೋವಿಡ್ ಮಾರ್ಗಸೂಚಿ ಅನ್ವಯದಂತೆ ನಡೆಯಿತು..

ಸಾಮೂಹಿಕ ವಿವಾಹ
ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿತಾಣ ದೇವರಾಯನದುರ್ಗ ಶ್ರೀ ಲಕ್ಷ್ಮಿನರಸಿಂಹ ದೇವಾಲಯದಲ್ಲಿ ನಾಲ್ಕು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಕೋವಿಡ್ ಮಾರ್ಗಸೂಚಿ ಅನ್ವಯದಂತೆ ನಡೆಯಿತು.
ಈ ವೇಳೆ ದೇವಾಲಯದ ಸಿಇಒ ಎಸ್.ಟಿ.ಸುನೀಲ್ ಕುಮಾರ್, ಊರ್ಡಿಗೆರೆ ಪಿಡಿಒ ನಾಗಭೂಷಣ್, ತಾಲೂಕು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎಂ.ಭೈರಾರೆಡ್ಡಿ, ಗ್ರಾಮ ಪಂಚಾಯತ್ ಸದಸ್ಯರು ಸೇರಿ ಅನೇಕರಿದ್ದರು.