ಕರ್ನಾಟಕ

karnataka

ETV Bharat / city

ಉಕ್ರೇನ್​​ನಲ್ಲಿ ಸಿಲುಕಿದ ತುಮಕೂರಿನ ಅಕ್ಕ ತಮ್ಮ.. ಆತಂಕದಲ್ಲಿರುವ ಪೋಷಕರಿಗೆ ಧೈರ್ಯ ತುಂಬಿದ ಶಾಸಕ - tumkur siblings in Ukraine

ಉಕ್ರೇನ್​ನಲ್ಲಿ ತುಮಕೂರಿನ ರೂಪಶ್ರೀ ಹಾಗೂ ಸುಮಂತ್ ಎಂಬುವರು ಸಿಲುಕಿದ್ದಾರೆ. ಈ ಸಹೋದರಿ ಮತ್ತು ಸಹೋದರನ ಪೋಷಕರು ಆತಂಕಕ್ಕೊಳಗಾಗಿದ್ದಾರೆ.

siblings from tumkur stuck in ukraine
ಉಕ್ರೇನ್​​ನಲ್ಲಿ ಸಿಲುಕಿದ ಅಕ್ಕ ತಮ್ಮ

By

Published : Feb 26, 2022, 1:27 PM IST

Updated : Feb 26, 2022, 1:50 PM IST

ತುಮಕೂರು: ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಮುಂದುವರಿದಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಉಕ್ರೇನ್​ನಲ್ಲಿ ತುಮಕೂರಿನ ಅಕ್ಕ-ತಮ್ಮ ಸಿಲುಕಿದ್ದು, ಅವರ ಪೋಷಕರು ಆತಂಕಕ್ಕೊಳಗಾಗಿದ್ದಾರೆ.

ಅಕ್ಕ ರೂಪಶ್ರೀ ಹಾಗೂ ತಮ್ಮ ಸುಮಂತ್ ಉಕ್ರೇನ್​ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ಇದೀಗ ಯುದ್ಧದ ವಾತಾವರಣವಿದ್ದು, ಮಕ್ಕಳ ಬಗ್ಗೆ ಹೆತ್ತವರು ಚಿಂತೆಗೊಳಗಾಗಿದ್ದಾರೆ. ಈ ವಿದ್ಯಾರ್ಥಿಗಳ ಮನೆಗೆ ಶಾಸಕ ಜ್ಯೋತಿ ಗಣೇಶ್ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಇದನ್ನೂ ಓದಿ:ಉಕ್ರೇನ್​ನಲ್ಲಿ ತುಮಕೂರು ವಿದ್ಯಾರ್ಥಿನಿ.. ಮಗಳನ್ನು ನೆನೆದು ಪೋಷಕರ ಕಣ್ಣೀರು..

ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿ ಗಣೇಶ್ ಎದುರು ಈ ವಿದ್ಯಾರ್ಥಿಗಳ ಪೋಷಕರು ಕಣ್ಣೀರು ಹಾಕಿದರು. ಆದಷ್ಟು ಬೇಗ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಕುಟುಂಬಸ್ಥರಿಗೆ ಶಾಸಕರು ಅಭಯ ನೀಡಿದರು.

Last Updated : Feb 26, 2022, 1:50 PM IST

ABOUT THE AUTHOR

...view details