ತುಮಕೂರು: ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ 3ನೆ ಪುಣ್ಯ ಸ್ಮರಣೆ ನಿಮಿತ್ತ ಇಂದು ಸಿದ್ಧಗಂಗಾ ಮಠದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಕ್ಕಳಿಗೆ ಊಟ ಬಡಿಸುವ ಮೂಲಕ ಸರ್ಕಾರದ ದಾಸೋಹ ದಿನದ ಆಚರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದರು.
ದಾಸೋಹ ದಿನದ ಹಿನ್ನೆಲೆಯಲ್ಲಿ ಮಠಕ್ಕೆ ಆಗಮಿಸಿದ ಸಿಎಂ, ಇಲ್ಲಿನ ಊಟದ ಮನೆಗೆ ತೆರಳಿ ಮಠದ ಮಕ್ಕಳಿಗೆ ಪಾಯಸ ಹಾಗೂ ಸಿಹಿ ಬೂಂದಿ ಬಡಿಸಿದರು. ಈ ವೇಳೆ ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಸಚಿವರಾದ ಮಾಧುಸ್ವಾಮಿ ಹಾಗೂ ಬಿಸಿ ನಾಗೇಶ್ ಉಪಸ್ಥಿತರಿದ್ದರು.