ತುಮಕೂರು: ಸಿಡಿಲು ಬಡಿದು ಓರ್ವ ಕುರಿಗಾಯಿ ಸ್ಥಳದಲ್ಲಿಯೇ ಮೃತ ಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಸಮೀಪದ ಕರೆಕಲ್ಲು ಬಂಡೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಸಿಡಿಲು ಬಡಿದು ಓರ್ವ ಸಾವು, ಮತ್ತೊಬ್ಬ ಗಂಭೀರ ಗಾಯ - ಈಟವಿ ಭಾರತ ತುಮಕೂರು ಸುದ್ದಿ
ಕುರಿ ಮೇಯಿಸಲು ತೆರಳಿದ್ದ ಇಬ್ಬರು ಕುರಿಗಾಯಿಗಳ ಪೈಕಿ ಸಿಡಿಲು ಬಡಿದು ಒರ್ವ ಮೃತಪಟ್ಟು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ಘಟನೆ ಇಂದು ಮಧ್ಯಾಹ್ನ ಜರುಗಿದೆ ಎಂದು ತಿಳಿದು ಬಂದಿದೆ.
ಸಿಡಿಲು ಬಡಿದು ಓರ್ವ ಸಾವು
ಲೋಕೇಶ ನಾಯ್ಕ 47 ಮೃತ ಕುರಿಗಾಹಿ. ಇನ್ನು ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿರುವ ರಾಜನಾಯಕ ಅವರನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಬ್ಬರೂ ಇಂದು ಬೆಳಗ್ಗೆ ಕುರಿಗಳನ್ನು ಮೇಯಿಸಲು ಸರ್ವೆ ನಂಬರ್ 62ರ ಹುಲ್ಲು ಕರಾಬು ಕಲ್ಲುಬಂಡೆ ಅಲ್ಲಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.