ತುಮಕೂರು : ನಗರದ ಎಂಜಿ ರಸ್ತೆಯಲ್ಲಿ ಏಕಾಏಕಿ ರಸ್ತೆ ಕುಸಿತ ಉಂಟಾಗಿ ಬೃಹತ್ ಕಂದಕ ನಿರ್ಮಾಣವಾಗಿದೆ. ಇದರಿಂದ ಕೆಲಕಾಲ ವಾಹನ ಚಾಲಕರು, ಸಾರ್ವಜನಿಕರು ಆತಂಕಕ್ಕೆ ಒಳಗಾದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ರಸ್ತೆ ಕುಸಿತ.. ತುಮಕೂರು ಎಂಜಿ ರಸ್ತೆಯಲ್ಲಿ ಬೃಹತ್ ಕಂದಕ ನಿರ್ಮಾಣ - ತುಮಕೂರು ಎಂಜಿ ರಸ್ತೆ ಕುಸಿತ
ಸುಮಾರು ಎರಡು ಅಡಿ ಅಗಲದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಕೆಳಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಈ ರೀತಿ ರಸ್ತೆ ಏಕಾಏಕಿ ಕುಸಿದು ಬೀಳಲು ಕಾರಣವಾಗಿದೆ..
ತುಮಕೂರು ಎಂಜಿ ರಸ್ತೆ
ಸುಮಾರು ಎರಡು ಅಡಿ ಅಗಲದ ಬೃಹತ್ ಕಂದಕ ನಿರ್ಮಾಣವಾಗಿದ್ದು, ಕೆಳಭಾಗದಲ್ಲಿ ಕೊಳಚೆ ನೀರು ಸಂಗ್ರಹವಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದಿರುವುದೇ ಈ ರೀತಿ ರಸ್ತೆ ಏಕಾಏಕಿ ಕುಸಿದು ಬೀಳಲು ಕಾರಣವಾಗಿದೆ. ಅಲ್ಲದೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಒಳಚರಂಡಿ ಸುಭದ್ರವಾಗಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲನೆ ಮಾಡದಿರುವುದು ಈ ಘಟನೆಗೆ ಕಾರಣವಾಗಿದೆ.
ಸದ್ಯ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ತುಮಕೂರು ಮಹಾನಗರ ಪಾಲಿಕೆ ಅಧಿಕಾರಿಗಳು ಸುತ್ತಲೂ ಪೈಪ್ಗಳನ್ನು ಹಾಕಿ ಸಾರ್ವಜನಿಕರು ಸಮೀಪ ಹೋಗದಂತೆ ಎಚ್ಚರಿಕೆ ನೀಡಿದರು.