ತುಮಕೂರು: ಇಲ್ಲಿನ ಎಂಪ್ರೆಸ್ ಕಾಲೇಜಿನ ಎದುರು ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಫ್ಲೆಕ್ಸ್ ಗಳಲ್ಲಿ ವೀರ್ ಸಾವರ್ಕರ್ ಫೋಟೋವಿದ್ದ ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದರು. ಇದೀಗ ಅದೇ ಪ್ರದೇಶದಲ್ಲಿ ಪುನಃ ಸಾವರ್ಕರ್ ಬೃಹತ್ ಭಾವಚಿತ್ರವನ್ನು ಎರಡು ಕಡೆ ಅಳವಡಿಸಲಾಗಿದ್ದು, ಸ್ಥಳದಲ್ಲಿ ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ.
ತುಮಕೂರು.. ಪೊಲೀಸ್ ಭದ್ರತೆಯೊಂದಿಗೆ ಸಾವರ್ಕರ್ ಫ್ಲೆಕ್ಸ್ ಪುನಃ ಅಳವಡಿಕೆ - ಸಾವರ್ಕರ್ ಫ್ಲೆಕ್ಸ್ ಹರಿದ ದುಷ್ಕರ್ಮಿಗಳು
ಸ್ವಾತಂತ್ರೋತ್ಸವ ಹಿನ್ನೆಲೆಯಲ್ಲಿ ತುಮಕೂರು ನಗರದಲ್ಲಿ ವೀರ್ ಸಾವರ್ಕರ್ ಅವರ ಫೋಟೋ ಇರುವ ಫ್ಲೆಕ್ಸ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದರು. ಇದೀಗ ಆದೇ ಸ್ಥಳದಲ್ಲಿ ಪೊಲೀಸ್ ಭದ್ರತೆಯೊಂದಿಗೆ ಮತ್ತೆ ವೀರ್ ಸಾವರ್ಕರ್ ಭಾವಚಿತ್ರ ಅಳವಡಿಸಲಾಗಿದೆ.
ಸಾವರ್ಕರ್ ಫ್ಲೆಕ್ಸ್ ಪುನಃ ಅಳವಡಿಕೆ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಕಾರ್ಯಕರ್ತರ ಸಂಘಟನೆ ವತಿಯಿಂದ ವಿನಾಯಕ ದಾಮೋದರ್ ಸಾವರ್ಕರ್ ಅವರಿಗೆ ಭಕ್ತಿ ಪೂರ್ವಕ ನಮನಗಳು ಎಂಬ ಬೃಹತ್ ಕಟ್ಔಟ್ ಅಳವಡಿಸಲಾಗಿದೆ.
ಇದನ್ನೂ ಓದಿ:ಶಿವಮೊಗ್ಗದ ಬಳಿಕ ತುಮಕೂರಲ್ಲೂ ವೀರ ಸಾವರ್ಕರ್ ಫ್ಲೆಕ್ಸ್ ಹರಿದ ಕಿಡಿಗೇಡಿಗಳು