ಕರ್ನಾಟಕ

karnataka

ETV Bharat / city

ತುಮಕೂರಿನಲ್ಲಿ ಮತ್ತೋರ್ವ ಪುನೀತ್ ರಾಜ್​​ಕುಮಾರ್ ಅಭಿಮಾನಿ ಹೃದಯಾಘಾತದಿಂದ ಸಾವು! - ಹೃದಯಾಘಾತದಿಂದ ಸಾವು

ಚಿಕಿತ್ಸೆ ಫಲಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಪುನೀತ್ ಅಭಿಮಾನಿಗಳ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ..

tumkur
ಅಪ್ಪು ಶ್ರೀನಿವಾಸ್

By

Published : Nov 3, 2021, 1:45 PM IST

ತುಮಕೂರು :ಜಿಲ್ಲೆಯಲ್ಲಿ ಮತ್ತೋರ್ವ ಪುನೀತ್ ರಾಜ್​​ಕುಮಾರ್ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ತುಮಕೂರು ತಾಲೂಕಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ (32) ಮೃತ ವ್ಯಕ್ತಿ. ಪುನೀತ್ ರಾಜ್​​ಕುಮಾರ್ ಮೃತಪಟ್ಟ ನಂತರ ಬೆಂಗಳೂರಿಗೆ ತೆರಳಿದ್ದ ಶ್ರೀನಿವಾಸ್​​ ಎರಡು ದಿನಗಳ ಕಾಲ ಪುನೀತ್ ಅವರ ಅಂತಿಮ ದರ್ಶನ ಪಡೆದಿದ್ದ.

ಅಂತಿಮ ದರ್ಶನ ಪಡೆದು ಮನೆಗೆ ಮರಳಿದಾಗ ಮಾನಸಿಕವಾಗಿ ನೊಂದಿದ್ದ. ಅಲ್ಲದೇ ಸರಿಯಾಗಿ ಊಟ ಹಾಗೂ ತಿಂಡಿಯನ್ನು ತಿನ್ನದೆ ಮೌನಕ್ಕೆ ಶರಣಾಗಿದ್ದ. ಬಳಿಕ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಎದೆನೋವಿನಿಂದ ಬಳಲುತ್ತಿದ್ದ ಶ್ರೀನಿವಾಸ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಿಸದೆ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಇಬ್ಬರು ಪುನೀತ್ ಅಭಿಮಾನಿಗಳ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ:"ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೇನೆ".. ಡೆತ್​ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ‌ ಆತ್ಮಹತ್ಯೆ

ABOUT THE AUTHOR

...view details