ತುಮಕೂರು:ನಟ ಪುನೀತ್ ರಾಜ್‍ಕುಮಾರ್ ಸಾವನ್ನು ಸಹಿಸಿಕೊಳ್ಳಲಾಗದ ತುಮಕೂರಿನ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. "ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೇನೆ" ಎಂದು ಡೆತ್ನೋಟ್ ಬರೆದಿಟ್ಟು, ಪುನೀತ್ ರಾಜ್‍ಕುಮಾರ್ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
"ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೇನೆ".. ಡೆತ್ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ ಆತ್ಮಹತ್ಯೆ - Puneet fan suicide in Tumkuru news
ನಟ ಪುನೀತ್ ರಾಜ್‍ಕುಮಾರ್ ಸಾವನ್ನು ಸಹಿಸಿಕೊಳ್ಳಲಾಗದ ತುಮಕೂರಿನ ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. "ನಾನು ಅಪ್ಪು ಅವರ ಅಭಿಮಾನಿಯಾಗಿದ್ದು, ಅವರ ಸಾವನ್ನು ಸಹಿಸಲಾಗುತ್ತಿಲ್ಲ" ಎಂದು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ..
!["ಅಪ್ಪು ಹೋದ ಜಾಗಕ್ಕೆ ನಾನು ಹೋಗುತ್ತೇನೆ".. ಡೆತ್ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ ಆತ್ಮಹತ್ಯೆ ತುಮಕೂರಿನಲ್ಲಿ ಡೆತ್ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ ಆತ್ಮಹತ್ಯೆ](https://etvbharatimages.akamaized.net/etvbharat/prod-images/768-512-13535528-thumbnail-3x2-tmk.jpg)
ತುಮಕೂರಿನಲ್ಲಿ ಡೆತ್ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ ಆತ್ಮಹತ್ಯೆ
ಡೆತ್ನೋಟ್ ಬರೆದಿಟ್ಟು ಪುನೀತ್ ಅಭಿಮಾನಿ ಆತ್ಮಹತ್ಯೆ
ತುಮಕೂರಿನ ಭರತ್ (20) ಆತ್ಮಹತ್ಯೆಗೆ ಶರಣಾದ ಅಭಿಮಾನಿ. ತುಮಕೂರು ತಾಲೂಕಿನ ಹೆಬ್ಬೂರಿನ ಕೋಡಿಪಾಳ್ಯದಲ್ಲಿ ಈ ಘಟನೆ ನಡೆದಿದೆ. "ನಾನು ಅಪ್ಪು ಅವರ ಅಭಿಮಾನಿಯಾಗಿದ್ದು, ಅವರ ಸಾವನ್ನು ಸಹಿಸಲಾಗುತ್ತಿಲ್ಲ" ಎಂದು ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಭರತ್, ಪುನೀತ್ ಇಲ್ಲದೆ ಇರೋದಕ್ಕೆ ಆಗುತ್ತಿಲ್ಲ. ಅವರು ಹೋದ ಜಾಗಕ್ಕೆ ನಾನೂ ಹೋಗುತ್ತೇನೆ. ನನ್ನ ಕಣ್ಣುಗಳನ್ನು ದಾನ ಮಾಡಿ ಎಂದು ಡೆತ್ನೋಟ್ ಬರೆದಿಟ್ಟು ಕೋಡಿಪಾಳ್ಯದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾನೆ. ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Last Updated : Nov 3, 2021, 2:08 PM IST