ಕರ್ನಾಟಕ

karnataka

ETV Bharat / city

ಇನ್ನೂ ಆಗಿಲ್ಲ ಅತ್ಯಾಚಾರಿಗಳ ಬಂಧನ; ತುಮಕೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ - ಅತ್ಯಾಚಾರ ಪ್ರಕರಣ ಭೇದಿಸಲು ಪೊಲೀಸರ ವಿಫಲ

ಮೈಸೂರು ಪ್ರಕರಣದಲ್ಲಿ ಆರೋಪಿಗಳನ್ನು ಅತಿ ಶೀಘ್ರದಲ್ಲೇ ಬಂಧಿಸಲಾಗಿತ್ತು. ಆದರೆ ತುಮಕೂರಿನಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

public-opinion-on-rape-case-in-tumakuru
ತುಮಕೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ

By

Published : Aug 31, 2021, 9:42 AM IST

ತುಮಕೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ರೇಪ್ ನಡೆದ ದಿನವೇ ತುಮಕೂರಲ್ಲೂ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಮೈಸೂರಿನ ಪ್ರಕರಣದ ಆರೋಪಿಗಳನ್ನು ನಾಲ್ಕೇ ದಿನದಲ್ಲಿ ಪೊಲೀಸರು ಬಂಧಿಸಿದ್ದಾರೆ. ಆದರೆ ತುಮಕೂರು ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಫಲವಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಉಂಟಾಗಿದೆ.

ತುಮಕೂರು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರ ಅಸಮಾಧಾನ

ಆಗಸ್ಟ್ 24ರಂದು ತುಮಕೂರು ತಾಲೂಕಿನ ಹೀರೇಹಳ್ಳಿಯ ಚೋಟಾಸಾಬರ್ ಪಾಳ್ಯದ ಗುಡ್ಡದ ಮೇಲೆ 35 ವರ್ಷ ವಿವಾಹಿತ ಮಹಿಳೆ ಜಯಲಕ್ಷ್ಮಿ ಅನುಮಾನಾಸ್ಪದವಾಗಿ ಸಾವನನ್ನಪ್ಪಿದ್ದಳು. ಗುಡ್ಡದ ಮೇಲೆ ದನ ಮೇಯಿಸಲು ಹೋದ ಜಯಲಕ್ಷ್ಮಿ ಹೆಣವಾಗಿ ಬಿದ್ದಿದ್ದಳು. ಜಯಲಕ್ಷ್ಮಿಯನ್ನು ವಿವಸ್ತ್ರಗೊಳಿಸಿ, ಮೈಮೇಲಿದ್ದ ಚಿನ್ನಾಭರಣ ದೋಚಿ ಕೊಲೆ ಮಾಡಲಾಗಿತ್ತು. ಮೈಮೇಲೆ ಕಚ್ಚಿದ ಮತ್ತು ಪರಚಿದ ಕಲೆಗಳು ಇತ್ತು. ಇದನ್ನೆಲಾ ಪರಿಗಣಿಸಿ ಮೇಲ್ನೋಟಕ್ಕೆ ಸಾಮೂಹಿಕ ಅತ್ಯಾಚಾರ ಎಂದೇ ಹೇಳಲಾಗಿತ್ತು.

ಆದರೆ, ಪ್ರಕರಣ ದಾಖಲಿಸಿಕೊಂಡ ಕ್ಯಾತಸಂದ್ರ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಕೇವಲ ಮೃತಳ ಸಂಬಂಧಿಕರ ವಿವಾರಣೆ ಮಾಡಿರುವುದನ್ನು ಬಿಟ್ಟರೆ ಇನ್ನಾವ ಮೂಲ ಸಾಕ್ಷ್ಯವನ್ನೂ ಪೊಲೀಸರು ಸಂಗ್ರಹಿಸಿಲ್ಲ. ಹಾಗಾಗಿ ಪೊಲೀಸರ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಇನ್ನೊಂದಡೆ, ಘಟನೆಯಿಂದ ಚೋಟಾಸಾಬರ್ ಪಾಳ್ಯ, ಹಿರೇಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಮಹಿಳೆಯರು ಒಂಟಿಯಾಗಿ ಓಡಾಡಲು ಹೆದರುವಂತಾಗಿದೆ. ಶಾಲೆಗೆ ಹೆಣ್ಣು ಮಕ್ಕಳನ್ನು ಕಳುಹಿಸುವುದು ಹೇಗೆ ಅಂತ ಯೋಚಿಸುವಂತಾಗಿದೆ. ಈವರೆಗೂ ಕಾಡು ಪ್ರಾಣಿಗಳ ಕಾಟವಿತ್ತು. ಇದೀಗ ಕಾಮುಕರ ಕಾಟ ಶುರುವಾಗಿರುವುದು ಭಯಹುಟ್ಟಿದೆ. ಆರು ದಿನದಿಂದ ಮನೆಯಿಂದ ಹೊರಗೆ ಹೋಗುತ್ತಿಲ್ಲ ಅಂತಾರೆ ಗ್ರಾಮದ ನಿವಾಸಿ ಮತ್ತು ಮೃತ ಜಯಲಕ್ಷ್ಮಿ ಸಂಬಂಧಿ ಶಿವಗಂಗಮ್ಮ.

ಘಟನೆ ಸಂಭವಿಸಿ ಬರೊಬ್ಬರಿ 6 ದಿನವಾಗಿದೆ. ಆದರೂ ಪೊಲೀಸರಿಗೆ ಒಂದು ಸಣ್ಣ ಸುಳಿವೂ ಸಿಕ್ಕಿಲ್ಲ ಎನ್ನಲಾಗಿದೆ. ಮೈಸೂರಿನಲ್ಲಿ ಅತ್ಯಾಚಾರಿಗಳನ್ನು ಹಿಡಿಯುವಲ್ಲಿ ಅಲ್ಲಿನ ಪೊಲೀಸರು ತೋರಿಸಿದ ಕಾಳಜಿ ಇಲ್ಲಿನ ಪೊಲೀಸರು ತೋರುತ್ತಿಲ್ಲ ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿದೆ. ಟವರ್ ಲೊಕೇಶನಲ್ಲೂ ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ ಎನ್ನಲಾಗಿದೆ. ಈ ನಡುವೆ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ಮಾಡಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೊಲೀಸರು ಕೇವಲ ಮೃತಳ ಸಂಬಂಧಿಕರ ವಿಚಾರಣೆ ಮಾಡುವುದರಲ್ಲೇ ಕಾಲ ಕಳೆಯಬಾರದು ಬೇರೆ ಬೇರೆ ಆಯಾಮದಲ್ಲೂ ತನಿಖೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅತ್ತ ಸರ್ಕಾರ ಕೂಡ ಈ ಅತ್ಯಾಚಾರ ಪ್ರಕರಣವನ್ನು ಮೈಸೂರು ಅತ್ಯಾಚಾರ ಪ್ರಕರಣದಂತೆ ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಆರೋಪಿಗಳ ಬಂಧನಕ್ಕೆ ಆಸ್ಥೆ ವಹಿಸಬೇಕು ಅನ್ನೋದು ಸ್ಥಳೀಯರ ಆಗ್ರಹ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಐಷಾರಾಮಿ ಆಡಿ ಕಾರು ಭೀಕರ ಅಪಘಾತ: ಶಾಸಕರ ಪುತ್ರ ಸೇರಿ 7 ಮಂದಿ ದುರ್ಮರಣ

ABOUT THE AUTHOR

...view details