ತುಮಕೂರು:ಪರಿಷ್ಕೃತ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಿಪಟೂರಿನಲ್ಲಿ ಇರುವ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಗೆ ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ನಡೆದಿದೆ. ಎನ್ಎಸ್ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ ನೇತೃತ್ವದಲ್ಲಿ 25ಕ್ಕೂ ಹೆಚ್ಚು ಕಾರ್ಯಕರ್ತರು ಸಚಿವ ನಾಗೇಶ್ ಮನೆ ಎದುರು ಜಮಾಯಿಸಿದ್ದರು.
ಕುವೆಂಪುಗೆ ಅವಮಾನ ಆರೋಪ: ಸಚಿವ ಬಿ ಸಿ ನಾಗೇಶ್ ಮನೆ ಎದುರು ಪ್ರತಿಭಟನೆ - text book issue
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ತುಮಕೂರು ನಿವಾಸದೆದುರು ಎನ್ಎಸ್ಯುಐ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನೆಯನ್ನು ಚದುರಿಸಿದ ಘಟನೆ ನಡೆದಿದೆ.
ಕುವೆಂಪುಗೆ ಅವಮಾನ ಆರೋಪ: ಸಚಿವ ಬಿ ಸಿ ನಾಗೇಶ್ ಮನೆಗೆ ಎದುರು ಪ್ರತಿಭಟನೆ
ಹತ್ತು ನಿಮಿಷಗಳ ಕಾಲ ನಾಗೇಶ್ ಅವರ ಮನೆ ಎದುರು ಘೋಷಣೆ ಕೂಗುತ್ತಿದ್ದರು, ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಅವರನ್ನು ಚದುರಿಸಿದರು. ಈ ನಡುವೆ ಪೊಲೀಸರು ಹಾಗೂ ಎನ್ಎಸ್ಯುಐ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.
ಇದನ್ನೂ ಓದಿ:ಪಠ್ಯದಿಂದ ಅಧ್ಯಾಯ ಕೈಬಿಡಿ ಎನ್ನುವುದು ಕಾಂಗ್ರೆಸ್‌ನಿಂದ ಉಪಕೃತರಾದ ಕೆಲವರ ನಾಟಕ: ಪ್ರತಾಪ್ ಸಿಂಹ
Last Updated : Jun 1, 2022, 10:11 PM IST