ತುಮಕೂರು:ಜಿಲ್ಲೆಯ ವಿವಿಧೆಡೆ ನಡೆಯುವ ಕೆಲ ಆರ್ಕೆಸ್ಟ್ರಾ (ರಸಮಂಜರಿ) ಕಾರ್ಯಕ್ರಮಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ವೇದಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಸ್ವತಃ ಆರ್ಕೆಸ್ಟ್ರಾ ಮಾಲೀಕರು ಮತ್ತು ಕಲಾವಿದರ ಸಂಘದ ಪದಾಧಿಕಾರಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ರಂಗರಾಜ್, ಆರ್ಕೆಸ್ಟ್ರಾಗಳನ್ನು ತುಮಕೂರು ಜಿಲ್ಲೆಯಲ್ಲಿ ಕೆಟ್ಟದಾಗಿ ಬಳಸಿಕೊಳ್ಳಲಾಗುತ್ತಿದೆ. ಕೆಲ ಆರ್ಕೆಸ್ಟ್ರಾಗಳಲ್ಲಿ ಅಸಭ್ಯ ನೃತ್ಯಗಳ ವಿರುದ್ಧ ಹೆಳಿಕೆ ನೀಡಿದಾಗ, ಇದನ್ನು ಸರಿಪಡಿಸಿಕೊಳ್ಳುವುದಾಗಿ ಆರ್ಕೆಸ್ಟ್ರಾ ಮಾಲೀಕರು ಭರವಸೆ ನೀಡಿದರು. ಆದರೆ ಅದಕ್ಕೆ ಕಡಿವಾಣ ಹಾಕದೇ ಪುನಃ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.