ಕರ್ನಾಟಕ

karnataka

ETV Bharat / city

ತುಮಕೂರು: ಖತರ್ನಾಕ್ ಬೈಕ್ ಕಳ್ಳನ ಬಂಧನ - 14 ಬೈಕ್​ಗಳ ಕಳ್ಳತನ

ಬರೋಬ್ಬರಿ 14 ಬೈಕ್​ಗಳನ್ನು ಕಳ್ಳತನ ಮಾಡಿ ಮಾರಾಟ ಮಾಡಿದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೈಕ್ ಕಳ್ಳನ ಬಂಧನ
ಬೈಕ್ ಕಳ್ಳನ ಬಂಧನ

By

Published : Dec 2, 2020, 12:02 PM IST

ತುಮಕೂರು: ವಿದ್ಯಾಭ್ಯಾಸ ತಲೆಗೆ ಹತ್ತಲಿಲ್ಲ ಎಂದು 8ನೇ ತರಗತಿಗೆ ಶಾಲೆ ಬಿಟ್ಟು ಕಳ್ಳತನಕ್ಕೆ ಇಳಿದಿದ್ದ ಖದೀಮನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನಲ್ಲಿ ಬೈಕ್ ಕಳ್ಳನ ಬಂಧನ

ಕೊರಟಗೆರೆ ತಾಲೂಕು ಅಕ್ಕಿರಾಂಪುರ ಗ್ರಾಮದ ನಟರಾಜ್ (27) ಬಂಧಿತ ಆರೋಪಿ. ಈತನ ಕೈಚಳಕದಿಂದಾಗಿ ಮನೆ ಮುಂದೆ ಬೈಕ್ ನಿಲ್ಲಿಸಲು ಜನರು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಬೈಕ್​ಗಳನ್ನು ಎಷ್ಟೇ ಜಾಗ್ರತೆಯಿಂದ ಲಾಕ್ ಮಾಡಿ ನಿಲ್ಲಿಸಿದ್ದರೂ ಸಹ ಕಳವು ಮಾಡಲಾಗುತ್ತಿತ್ತು. ಕೊರಟಗೆರೆ ತಾಲೂಕಿನ ಹೊಳವನಳ್ಳಿ, ಅಕ್ಕಿರಾಂಪುರ, ಸೋಂಪುರ, ವಡ್ಡಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೈಕ್​ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದ ಕಾರಣ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿತ್ತು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಕೊನೆಗೂ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಇನ್ನು ವಿಚಾರಣೆ ವೇಳೆ ಇದುವರೆಗೆ ಬರೋಬ್ಬರಿ 14 ಬೈಕ್​ಗಳನ್ನು ಕಳ್ಳತನ ಮಾಡಿರುವುದಾಗಿ ನಟರಾಜ್ ತಿಳಿಸಿದ್ದಾನೆ. ಕೊರಟಗೆರೆ, ತುಮಕೂರು ನಗರ, ಗ್ರಾಮಾಂತರ, ಕ್ಯಾತ್ಸಂದ್ರ, ಜಯನಗರ, ಹೊಸ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ 14 ಬೈಕ್‌ಗಳನ್ನು ಕಳ್ಳತನ ಮಾಡಿ ಸಿಕ್ಕಸಿಕ್ಕವರಿಗೆ ಮನೆಯಲ್ಲಿ ಕಷ್ಟ ಇದೆ, ಹಣದ ಅವಶ್ಯಕತೆ ಇದೆ ಎಂದು ಸಬೂಬು ಹೇಳಿ ಸಿಕ್ಕಷ್ಟು ಹಣಕ್ಕೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.

ABOUT THE AUTHOR

...view details