ಕರ್ನಾಟಕ

karnataka

ETV Bharat / city

ಬೋನಿಗೆ ಬಿದ್ದ ಚಿರತೆಗೆ ಮಚ್ಚು ತೋರಿಸಿ ಕೆರಳಿಸಿದ ಕಿಡಿಗೇಡಿಗಳು! - ತುಮಕೂರು ಲೇಟೆಸ್ಟ್​ ನ್ಯೂಸ್​

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಚನಕಟ್ಟೆ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದ್ದ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಈ ವೇಳೆ ಸ್ಥಳೀಯರು ಬೋನಿನಲ್ಲಿದ್ದ ಚಿರತೆಗೆ ಮಚ್ಚು ತೋರಿಸಿ ಬೆದರಿಸಿದ್ದು, ಸ್ಥಳೀಯರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

people-frighten-with-leopard
ಮಚ್ಚು ತೋರಿಸಿ ಬೋನಿಗೆ ಬಿದ್ದ ಚಿರತೆ ಕೆರಳಿಸಿದ ಜನರು!

By

Published : Jan 9, 2021, 2:19 PM IST

ತುಮಕೂರು: ಬೋನಿಗೆ ಬಿದ್ದ ಚಿರತೆಗೆ ಮುಚ್ಚು ತೋರಿಸಿ ಬೆದರಿಸಿದ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಕಾಚನಕಟ್ಟೆಯಲ್ಲಿ ನಡೆದಿದೆ.

ಮಚ್ಚು ತೋರಿಸಿ ಬೋನಿಗೆ ಬಿದ್ದ ಚಿರತೆ ಕೆರಳಿಸಿದ ಜನರು!

ಅನೇಕ ದಿನಗಳಿಂದ ಕಾಚನಕಟ್ಟೆ ಸುತ್ತಮುತ್ತಲಿನ ಜನರ ನಿದ್ದೆಗೆಡಿಸಿದ್ದ ಚಿರತೆ, ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಬೋನಿಗೆ ಬಿದ್ದ ಚಿರತೆ ಕೆಂಡಾಮಂಡಲವಾಗಿತ್ತು. ಈ ವೇಳೆ ಸ್ಥಳೀಯರು, ಬೋನಿನಲ್ಲಿದ್ದ ಚಿರತೆಗೆ ಮಚ್ಚು ತೋರಿಸಿ ಬೆದರಿಸಿದ್ದಾರೆ. ಇದನ್ನು ಕಂಡ ಚಿರತೆ ಮತ್ತಷ್ಟು ರೋಷಾವೇಷದಿಂದ ಅರಚಾಡಿದೆ. ಈ ರೀತಿ ಮಚ್ಚು ಹಿಡಿದು ಬೋನಿನಲ್ಲಿದ್ದ ಚಿರತೆಯನ್ನು ಕೆರಳಿಸಲು ಮುಂದಾಗಿರುವ ಕಿಡಿಗೇಡಿಗಳ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್, ಚಿರತೆಗೆ ಯಾವುದೇ ರೀತಿಯ ಗಾಯಗಳಾಗಿಲ್ಲ, ಆರೋಗ್ಯವಾಗಿದೆ. ಜನವರಿ 8ರ ಸಂಜೆ 7 ಗಂಟೆ ಸಂದರ್ಭದಲ್ಲಿ ಸುಮಾರು ನಾಲ್ಕು ವರ್ಷ ವಯಸ್ಸಿನ ಚಿರತೆ ಬೋನಿಗೆ ಬಿದ್ದಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details