ಕರ್ನಾಟಕ

karnataka

ETV Bharat / city

ತುಮಕೂರಲ್ಲಿ ವಿಶೇಷ ತಂಡ: ಕೊರೊನಾ ನಿಯಮ ಉಲ್ಲಂಘಿಸಿದವರಿಂದ ಲಕ್ಷ ರೂಪಾಯಿ ದಂಡ ವಸೂಲಿ - ತುಮಕೂರು ಸುದ್ದಿ

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಏಳು ಬಸ್ಸುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್​ಗಳು, ಬಾರ್ ಅಂಡ್ ರೆಸ್ಟೋರೆಂಟ್​ಗಳ ವಿರುದ್ಧ ಪ್ರಕರಣ ದಾಖಲಿಸಿ 1,25,000 ರೂ. ದಂಡ ವಸೂಲಿ ಮಾಡಲಾಗಿದೆ.

tumkur
ತುಮಕೂರು

By

Published : Apr 20, 2021, 3:44 PM IST

ತುಮಕೂರು:ಕೊರೊನಾ ನಿಯಮ ಮೀರಿ ಮಾಸ್ಕ್ ಧರಿಸದವರ ವಿರುದ್ಧ 171 ಪ್ರಕರಣಗಳನ್ನು ದಾಖಲಿಸಿ, ಅಧಿಕಾರಿಗಳ ವಿಶೇಷ ತಂಡ ತುಮಕೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಂಡಿದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳದ ಏಳು ಬಸ್ಸುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್​ಗಳು, ಬಾರ್ ಅಂಡ್ ರೆಸ್ಟೋರೆಂಟ್​ಗಳ ವಿರುದ್ಧ ಪ್ರಕರಣ ದಾಖಲಿಸಿ 1,25,000 ರೂ. ದಂಡ ವಸೂಲಿ ಮಾಡಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ತುಮಕೂರು ಉಪವಿಭಾಗದ ಅಧಿಕಾರಿಗಳ ವಿಶೇಷ ತಂಡ ಮಾಸ್ಕ್​ ಧರಿಸದವರ ವಿರುದ್ಧ 171 ಪ್ರಕರಣ ದಾಖಲಿಸಿ 28,250 ರೂ. ದಂಡ ವಿಧಿಸಿದ್ದಾರೆ. ಇದಲ್ಲದೆ ಕೊರೊನಾ ನಿಯಮ ಮೀರಿದ ಶೇಕಡಾ 50ಕ್ಕಿಂತ ಜಾಸ್ತಿ ಪ್ರಯಾಣಿಕರಿಗೆ ದಂಡ ವಿಧಿಸಿ, 35 ಸಾವಿರ ರೂ. ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ.

ವಾಣಿಜ್ಯ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಕೊರೊನಾ ನಿಯಮ ಉಲ್ಲಂಘನೆ ಮಾಡಿ ವಾಣಿಜ್ಯ ವಹಿವಾಟು ನಡೆಸುತ್ತಿದ್ದ ಒಂದು ಸೀರೆ ಅಂಗಡಿ, ಒಂದು ಹೋಟೆಲ್, 2 ಕಲ್ಯಾಣ ಮಂಟಪ, ಒಂದು ಚಿನ್ನದ ಮಾರಾಟ ಮಳಿಗೆ, ಎರಡು ಬೇಕರಿಗಳು, 2 ಮೊಬೈಲ್ ಅಂಗಡಿಗಳು, ಮೂರು ಬಟ್ಟೆ ಅಂಗಡಿ, ಒಂದು ಎಲೆಕ್ಟ್ರಿಕಲ್ ಅಂಗಡಿ, ಎರಡು ಬಾರ್ ಅಂಡ್ ರೆಸ್ಟೋರೆಂಟ್​ಗಳಿಗೆ ದಂಡ ವಿಧಿಸಿ 90,000 ರೂ. ದಂಡ ವಿಧಿಸಲಾಗಿದೆ.

ABOUT THE AUTHOR

...view details