ತುಮಕೂರು: ಯುದ್ಧಭೂಮಿಯಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಕೆಲಸ ಚುರುಕುಗೊಂಡಿದೆ. ಆದರೆ, ಉಕ್ರೇನ್ನಲ್ಲಿ ಸ್ಥಳೀಯರು ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಆರೋಪಿಸಿದ್ದಾರೆ.
ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ತುಮಕೂರಿನ ಕೆಲ ವಿದ್ಯಾರ್ಥಿಗಳು ಗಡಿ ದಾಟಿ ಭಾರತಕ್ಕೆ ಬರಲು ಹರಸಾಹಸ ಪಡುತ್ತಿದ್ದು, ಗಡಿಯಲ್ಲಿ ಸ್ಥಳೀಯರಿಂದ ತೀವ್ರ ಕುರುಕುಳ ಎದುರಾಗಿದೆ ಎಂದು ತಮ್ಮ ಪೋಷಕರ ಬಳಿ ಅಳಲು ತೋಡಿಕೊಳ್ಳುತ್ತಿದ್ದಾರೆ.