ತುಮಕೂರು:ಆಕ್ಸಿಜನ್ ಕೊರತೆ ಎದುರಾಗಿದೆ ರೋಗಿಗಳನ್ನು ಕರೆದುಕೊಂಡು ಹೋಗುವಂತೆ ನಗರದ ಬೈಪಾಸ್ನಲ್ಲಿರುವ ಅಶ್ವಿನಿ ಆಸ್ಪತ್ರೆ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ ಎಂದು ರೋಗಿಗಳ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ.
ಆಕ್ಸಿಜನ್ ಖಾಲಿಯಾಗಿದೆ ಅಂತಿದಾರೆ ಆಸ್ಪತ್ರೆಯವರು: ತುಮಕೂರಲ್ಲಿ ರೋಗಿಗಳ ಸಂಬಂಧಿಕರ ಅಳಲು - Karnataka corona update
ತುಮಕೂರಲ್ಲೂ ಆಕ್ಸಿಜನ್ ಕೊರತೆ ಎದುರಾಗಿದೆಯಾ ಎಂಬ ಪ್ರಶ್ನೆ ಮೂಡುತ್ತಿದೆ. ಈ ಬಗ್ಗೆ ಅಧಿಕಾರಿಗಳು ಶೀಘ್ರವೇ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ.
ಈವರೆಗೆ ಸಂಗ್ರಹಿಸಿಟ್ಟಿದ್ದ ಆಕ್ಸಿಜನ್ ಸಂಪೂರ್ಣ ಖಾಲಿಯಾಗಿದೆ. ಹೀಗಾಗಿ ರೋಗಿಗಳನ್ನು ಆಸ್ಪತ್ರೆಯಿಂದ ಕರೆದುಕೊಂಡು ಹೋಗುವಂತೆ ಸಿಬ್ಬಂದಿ ಒತ್ತಡ ಹಾಕುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಯಾರು ಕೂಡ ಸಮಸ್ಯೆ ಬಗೆಹರಿಸಲು ಆಸ್ಪತ್ರೆಗೆ ಬಂದಿಲ್ಲ. ಬೆಂಗಳೂರಿಂದ ಬಂದು ಇಲ್ಲಿ ದಾಖಲಾಗಿರುವ ರೋಗಿಗಳು ಅತಂತ್ರರಾಗಿದ್ದಾರೆ. ಬೇರೆ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಸಹ ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸಬೇಕೆಂದು ರೋಗಿಗಳ ಸಂಬಂಧಿಕರು ಅಂಗಲಾಚುತ್ತಿದ್ದಾರೆ.
ಬೆಂಗಳೂರಲ್ಲಿ ಬೆಡ್ ಸಮಸ್ಯೆಯಾದ ಹಿನ್ನೆಲೆಯಲ್ಲಿ ಹತ್ತಿರದಲ್ಲಿದ್ದ ತುಮಕೂರಿಗೆ ಬಂದು ಅಲ್ಲಿನ ಆಸ್ಪತ್ರೆಗೆ ಸೋಂಕಿತರು ದಾಖಲಿಸಲಾಗಿದೆ.