ತುಮಕೂರು :ಜೆಡಿಎಸ್ನವರ ಟಾರ್ಗೆಟ್ ಬಿಜೆಪಿಯಲ್ಲ, ಬದಲಾಗಿ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ ಸೋಲಿಸಿದರೆ ಅವರಿಗೆ ಲಾಭ ಎಂದುಕೊಂಡಿದ್ದಾರೆ. ಅವರು ಮೂರ್ಖರು. ಅಲ್ಪಸಂಖ್ಯಾತರು ಪ್ರಬುದ್ಧರಿದ್ದಾರೆ. ಅವರಿಗೆ ಗೊತ್ತು. ಜೆಡಿಎಸ್ಗೆ ಮತ ಹಾಕಿದರೆ ಬಿಜೆಪಿಗೆ ಮತ ಹಾಕಿದಂತೆ ಎಂಬ ಅರಿವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಜೊತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ :ತುಮಕೂರಿನಲ್ಲಿ ಮಾಜಿ ಶಾಸಕ ರಫೀಕ್ ಅಹಮದ್ ಅವರ ಕಾಲೇಜಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಬಿಜೆಪಿ ಜೊತೆ ಜೆಡಿಎಸ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದೆ. ಎರಡೂ ಕಡೆ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಜೆಡಿಎಸ್‌ನವರು ಕಣಕ್ಕೆ ಇಳಿಸಿದ್ದಾರೆ. ಹಿಂದೆ ಎಂದೂ ಕೂಡ ಹಾಕಿಲ್ಲ. ಮುಸ್ಲಿಂ ಮತಗಳನ್ನು ಬೇರ್ಪಡಿಸಲು ಜೆಡಿಎಸ್ ತಂತ್ರಗಾರಿಕೆ ಅಡಗಿದೆ. ಈ ಮೂಲಕ ಬಿಜೆಪಿ ಬೆಂಬಲಿಸಲು ಬಯಸಿದ್ದರು ಎಂದರು.