ತುಮಕೂರು:ಕುಣಿಗಲ್ ತಾಲೂಕಿನಲ್ಲಿ ಕಳೆದ ತಿಂಗಳಷ್ಟೆ ಮಹಿಳೆಯೊಬ್ಬರನ್ನು ಬಲಿತೆಗೆದುಕೊಂಡಿದ್ದ ಚಿರತೆ, ಇಂದು ಕುರಿಗಾಹಿಯೊಬ್ಬರ ಮೇಲೆರಗಿ ಕೊಂದು ಹಾಕಿರುವ ಘಟನೆ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆದಿದೆ.
ಚಿರತೆ ದಾಳಿಗೆ ಕುರಿಗಾಹಿ ಬಲಿ: ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ - ಕುಣಿಗಲ್ ತಾಲೂಕಲ್ಲಿ ಚಿರತೆ ದಾಳಿ
ಜಮೀನಿನ ಬಳಿ ಕುರಿ ಮೇಯಿಸುವ ವೇಳೆ ಚಿರತೆ ದಾಳಿ ನಡೆಸಿ ಕುರಿಗಾಹಿಯೊಬ್ಬರನ್ನು ಬಲಿ ಪಡೆದಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ದೊಡ್ಡ ಮರಳವಾಡಿ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಮರಳವಾಡಿ ಗ್ರಾಮದ ಅನಂದಯ್ಯ (60) ಚಿರತೆ ದಾಳಿಗೆ ಬಲಿಯಾದ ಕುರಿಗಾಹಿ. ಜಮೀನಿನ ಬಳಿ ಕುರಿ ಮೇಯಿಸುವಾಗ ದಾಳಿ ನಡೆಸಿದ ಚಿರತೆ, ಆನಂದಯ್ಯರ ಕುತ್ತಿಗೆಯನ್ನು ಕಚ್ಚಿ ಸಾಯಿಸಿದ್ದು, ಪದೇ ಪದೇ ನಡೆಯುತ್ತಿರುವ ಚಿರತೆ ದಾಳಿಯಿಂದ ಗ್ರಾಮದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಇನ್ನು ಚಿರತೆ ದಾಳಿ ತಡೆಯಲು ಕ್ರಮ ಕೈಗೊಳ್ಳದ ಅರಣ್ಯಾಧಿಕಾರಿಗಳ ವಿರುದ್ಧ ಕುಣಿಗಲ್ ಶಾಸಕ ರಂಗನಾಥ್ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ಡಿಎಫ್ಒ ಗಿರೀಶ್, ಪ್ರತಿಭಟನಾಕಾರರನ್ನು ಸಮಾಧಾನ ಪಡಿಸುವಲ್ಲಿ ಹರಸಾಹಸ ಪಟ್ಟರು. ಅಲ್ಲದೆ ಆದಷ್ಟು ಬೇಗ ಚಿರತೆ ಸೆರೆ ಹಿಡಿಯುವುದಾಗಿ ಭರವಸೆ ನೀಡಿದರು.