ತುಮಕೂರು: ನಮಗೂ ಮತ್ತು ಅಶ್ವತ್ಥ್ ನಾರಾಯಣ್ಗೂ ಯಾವುದೇ ಸಂಬಂಧ ಇಲ್ಲ. ಅವರ ಮುಖವೇ ನಾವು ನೋಡಿಲ್ಲ. ಸಿದ್ದರಾಮಯ್ಯ ರಾಜಕೀಯ ವೋಟ್ಗಾಗಿ ಈ ರೀತಿ ಮಾಡ್ತಿದ್ದಾರೆ ಎಂದು ಪಿಎಸ್ಐ ಪರೀಕ್ಷೆಯಲ್ಲಿ 10ನೇ ರ‍್ಯಾಂಕ್ ಪಡೆದಿರುವ ಪೊಲೀಸ್ ಪೇದೆ ನಾಗೇಶ್ ಗೌಡರ ತಂದೆ ಸೋಬ್ಬಗಯ್ಯ ತಿಳಿಸಿದ್ದಾರೆ.
ಜಿಲ್ಲೆಯ ಕುಣಿಗಲ್ ತಾಲೂಕಿನ ಚಿಕ್ಕಮಾವತ್ತೂರು ಗ್ರಾಮದಲ್ಲಿ ಮಾತನಾಡಿದ ಅವರು, ನಾವು ರೈತರು. ವ್ಯವಸಾಯ ಮಾಡ್ಕೊಂಡು ಜೀವನ ಸಾಗಿಸುತ್ತಿದ್ದೇವೆ. 80 ರಿಂದ 90 ಲಕ್ಷ ಹಣ ಎಲ್ಲಿಂದ ತರೋಕಾಗುತ್ತೆ. ರಾಜಕೀಯ ದುರುದ್ದೇಶದ ಹಿನ್ನೆಲೆ ಈ ರೀತಿ ನನ್ನ ಮಗನ ವಿರುದ್ಧ ಸುಳ್ಳು ಆರೋಪ ಮಾಡ್ತಿದ್ದಾರೆ ಎಂದರು.
ನಾಗೇಶ್ ಗೌಡರ ತಂದೆ ಸೋಬ್ಬಗಯ್ಯ ಹೇಳಿಕೆ ಸುಮಾರು 6 ವರ್ಷಗಳಿಂದ ನಮ್ಮ ಮಗನನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದ್ದೇವೆ. ಕಾನೂನು ವ್ಯಾಸಂಗ್ ಮಾಡ್ತೀನಿ ಅಂದಿದ್ದ. ಆಮೇಲೆ ತಹಸೀಲ್ದಾರ್ ಆಗ್ಬೇಕು ಅಂತ ಹೋದ. ಅದಾದಮೇಲೆ ಸಬ್ ಇನ್ಸ್ಪೆಕ್ಟರ್ ಆಗ್ಬೇಕು ಅಂತ ಇಷ್ಟಪಟ್ಟ. ಇವಾಗ ಕಾನ್ಸ್ಟೇಬಲ್ ಆಗಿ ಕೆಲಸ ಮಾಡ್ತಿದ್ದಾನೆ ಎಂದರು.
ಓದಿ:ಸರ್ಕಾರ ಬಿದ್ದರೂ ಪರ್ವಾಗಿಲ್ಲ ಕಿಂಗ್ ಪಿನ್ ಹೆಸರು ಹೇಳಿ: ಮಾಜಿ ಮುಖ್ಯಮಂತ್ರಿ HDKಗೆ ಆರಗ ಸವಾಲು
ಮೊದಲು ದಾವಣಗೆರೆಯಲ್ಲಿ ಸೇವೆ ಸಲ್ಲಿಸಿದ. ಬಳಿಕ ಬಾಗಲಕೋಟೆಗೆ ಹೋಗಿದ್ದ. ಇವಾಗ ನೆಲಮಂಗಲದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕೆಲಸ ಮಾಡ್ತಿದ್ದ. ಪಿಎಸ್ಐ ಪರೀಕ್ಷೆ ಬರೆದದ್ದು ನಿಜ. ಪಿಎಸ್ಐ ಎಕ್ಸಾಂ ಬರೆದು ಪಾಸ್ ಆಗಿ ಬಂದಿದ್ದ. ಅಷ್ಟು ಬಿಟ್ರೆ ನಮಗೆ ಬೇರೆ ಮಾಹಿತಿ ಗೊತ್ತಿಲ್ಲ ಎಂದರು.
ಇದು ರಾಜಕೀಯ ಹಾಗೂ ವೋಟ್ಗಾಗಿ ಆಗ್ತಿರುವ ವಿಚಾರ. ನನ್ನ ಮಗ ನಾಗೇಶ್ ಗೌಡ ಯಾರು ಅಂತಾನೆ ಸಿದ್ದರಾಮಯ್ಯಗೆ ಗೊತ್ತಿಲ್ಲ. ಸುಮ್ನೆ ನಾಗೇಶ್ ಗೌಡ ಅಂತ ನಮ್ಮ ಮಗನನ್ನ ಹಿಡಿದುಕೊಂಡು ಈ ರೀತಿಯಾಗಿ ಮಾಡ್ತಿದ್ದಾರೆ. ಇಷ್ಟು ದಿನ ಮಾಗಡಿ ಅವರು ಅಂತಾ ಹೇಳ್ತಿದ್ರು. ಇವಾಗ ನಮ್ಮ ಮಗ ಅಂತ ಹಿಡ್ಕೊಂಡಿದ್ದಾರೆ ಎಂದರು.
ನನ್ನ ಮಗನ ವಿರುದ್ಧ ರಾಜಕೀಯ ನಾಯಕರಿಗೆ ರಾಂಗ್ ಇನ್ಪರ್ಮೇಶನ್ ಕೊಡ್ತಿದ್ದಾರೆ. ಪಿಎಸ್ಐ ಎಕ್ಸಾಂನಲ್ಲಿ 10ನೇ ರ್ಯಾಂಕ್ನಲ್ಲಿ ನನ್ನ ಮಗ ಪಾಸ್ ಆಗಿದ್ದಾನೆ. ನಾವು ದುಡ್ಡು ಕೊಟ್ಟಿರೋದು ಆಗ್ಲಿ, ಅದರ ಬಗ್ಗೆ ಚೆಕ್ ಅಥವಾ ಬ್ಯಾಂಕ್ ಡಿಟೈಲ್ಸ್ ಆಗಲಿ ತೆಗೆದುಕೊಳ್ಳಬೇಕು. ಅದು ಬಿಟ್ಟು ರಾಜಕೀಯ ದುರುದ್ದೇಶಕ್ಕಾಗಿ ಈ ರೀತಿ ನಮ್ಮ ಮಗನನ್ನ ಬಲಿಪಶು ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ನಾಗೇಶ್ ಗೌಡರ ತಂದೆ ಸೋಬ್ಬಗಯ್ಯ ಪರೋಕ್ಷವಾಗಿ ಹರಿಹಾಯ್ದರು.
ಓದಿ:ಪಿಎಸ್ಐ ಅಕ್ರಮದಲ್ಲಿ ಕಾನ್ಸ್ಟೇಬಲ್ನಿಂದ ಹಿಡಿದು ಡಿವೈಎಸ್ಪಿಯವರೆಗೆ ಒಳಗೆ ಹಾಕಿದ್ದೇವೆ: ಸಚಿವ ಕಾರಜೋಳ
ಮೇ 5ರಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ,ದರ್ಶನ್ ಗೌಡ ಮತ್ತು ನಾಗೇಶ್ ಗೌಡ ಇಬ್ಬರು ಸಚಿವ ಅಶ್ವತ್ಥ್ ನಾರಾಯಣ್ ಸಂಬಂಧಿಕರು ಎಂದು ಆರೋಪಿಸಿದ್ದರು.
ಮಾಗಡಿಯ ದರ್ಶನ್ ಹಾಗೂ ಕುಣಿಗಲ್ ಮೂಲದ ನಾಗೇಶ್ ಗೌಡನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದರು. ಇದೀಗ ನಾಗೇಶ್ ಗೌಡ ತಲೆಮಾರಿಸಿಕೊಂಡಿದ್ದು, ಪೊಲೀಸರು ಶೋಧ ಕೈಗೊಂಡಿದ್ದಾರೆ ಎನ್ನಲಾಗ್ತಿದೆ.