ತುಮಕೂರು:ಸಿದ್ದಗಂಗಾ ಮಠದ ಆವರಣದಲ್ಲಿರುವ ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೋವಿಡ್ ವ್ಯಾಕ್ಸಿನ್ ಪಡೆದರು.
ಕೋವಿಡ್ ವ್ಯಾಕ್ಸಿನ್ ಪಡೆದ ನಂತರ ಅರ್ಧ ಗಂಟೆಗಳ ಕಾಲ ವೈದ್ಯರ ನಿರೀಕ್ಷಣೆಯಲ್ಲಿದ್ದರು. ನಂತರ ಎಂದಿನಂತೆ ಮಠದ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ನಾಗೇಂದ್ರಪ್ಪ ಹಾಜರಿದ್ದರು.
ಸಿದ್ದಗಂಗಾ ಮಠಕ್ಕೆ ಪುನೀತ್ ರಾಜ್ಕುಮಾರ್ ಭೇಟಿ:
ಏಪ್ರಿಲ್ 1ರಂದು ಬಿಡುಗಡೆಯಾಗಲಿರುವ ಯುವರತ್ನ ಚಲನಚಿತ್ರದ ಪ್ರಮೋಷನ್ಗಾಗಿ ತುಮಕೂರಿಗೆ ಆಗಮಿಸಿದ್ದ ಪುನೀತ್ ರಾಜ್ಕುಮಾರ್, ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಇಡೀ ಚಿತ್ರತಂಡಕ್ಕೆ ಸ್ವಾಮೀಜಿ ಆಶೀರ್ವದಿಸಿದರು. ಬಳಿಕ ಪುನೀತ್, ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ದರ್ಶನ ಪಡೆದರು.
ಓದಿ:ಸದನದಲ್ಲಿ ‘ಸಿಡಿ’ದೆದ್ದ ಪ್ರತಿಪಕ್ಷ... ‘ಕೈ’ಯಲ್ಲಿ ‘ಸಿಡಿ’ ಹಿಡಿದು ಪ್ರತಿಭಟಿಸಿದ ನಾಯಕರು