ಕರ್ನಾಟಕ

karnataka

ETV Bharat / city

ಕಾಂಗ್ರೆಸ್ & ಕುಮಾರಸ್ವಾಮಿ ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ‌: ಎಂಪಿ ರೇಣುಕಾಚಾರ್ಯ - ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ

ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ತಾಲಿಬಾನಿಗಳಿದ್ದಂತೆ. ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರ ಹಿಂದುತ್ವ, ದೇಶದ ಸಂಸ್ಕೃತಿಯನ್ನ ಉಳಿಸುವ ಕಾರ್ಯ ಮಾಡುತ್ತಿವೆ ಎಂದು ಎಂಪಿ ರೇಣುಕಾಚಾರ್ಯ ಹೇಳಿದರು.

MP Renukacharya
ಎಂಪಿ ರೇಣುಕಾಚಾರ್ಯ

By

Published : Oct 7, 2021, 4:10 PM IST

ತುಮಕೂರು: ಕಾಂಗ್ರೆಸ್ ಮತ್ತು ಹೆಚ್​​.ಡಿ ಕುಮಾರಸ್ವಾಮಿ ತಾಲಿಬಾನಿಗಳಂತೆ ವರ್ತಿಸುತ್ತಿದ್ದಾರೆ‌. ನಿಮ್ಮ ಭಾಷೆ, ನಿಮ್ಮ ನಡವಳಿಕೆಗೆ ದೇಶದ ಜನ ತಕ್ಕ ಪಾಠ ಕಲಿಸುತ್ತಾರೆ‌ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಕುಮಾರಸ್ವಾಮಿ ವಿರುದ್ಧ ಎಂಪಿ ರೇಣುಕಾಚಾರ್ಯ ವಾಗ್ದಾಳಿ

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ವೇಳೆ, ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಕುಮಾರಸ್ವಾಮಿ ತಾಲಿಬಾನಿಗಳಿದ್ದಂತೆ. ಭಾರತೀಯ ಜನತಾ ಪಾರ್ಟಿ ಮತ್ತು ಸಂಘ ಪರಿವಾರ ಹಿಂದುತ್ವ, ದೇಶದ ಸಂಸ್ಕೃತಿ ಉಳಿಸುವಂತ ಕಾರ್ಯ ಮಾಡುತ್ತಿವೆ ಎಂದರು.

ದೇಶದಲ್ಲಿ ಎಲ್ಲಿಯೇ ವಿಪತ್ತು ನಡೆದರೆ ಮೊದಲು ಎದೆಗೊಟ್ಟು ನಿಲ್ಲುವುದೇ ಸಂಘ ಪರಿವಾರ. ಐಎಎಸ್, ಕೆಎಎಸ್ ಮಾಡುವವರಿಗೆ ಆರ್​​ಎಸ್ಎಸ್ ನಿಂದ ಇನ್ ಫ್ಲೂಯೆನ್ಸ್ ಮಾಡೋಕಾಗುತ್ತಾ?. ಅವರವರ ಅರ್ಹತೆ, ಅಂಕಗಳ ಮೇಲೆ ಅಂತವರಿಗೆ ಅವಕಾಶ ಸಿಗುತ್ತದೆ ಎಂದರು.

ಕುಮಾರಸ್ವಾಮಿ ಆಕಸ್ಮಿಕವಾಗಿ 2 ಬಾರಿ ಸಿಎಂ ಆದವರು. ಕುಮಾರಸ್ವಾಮಿಗೆ ಈಗ ಅಧಿಕಾರ ಇಲ್ಲ, ಹತಾಶ ಮನೋಭಾವದಿಂದ ಮಾತನಾಡುತ್ತಿದ್ದಾರೆ. ಅವರಿಗೆ ಬುದ್ದಿ ಭ್ರಮಣೆಯಾಗಿದೆ. ಹಾಗಾಗಿ ಸಂಘ ಪರಿವಾರದ ಬಗ್ಗೆ ಹುಚ್ಚುಚ್ಚಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.

ಡಿಕೆಶಿಯವರ ತುಘಲಕ್ ದರ್ಬಾರ್ ಮರೆತಿಲ್ಲ. ಎಸ್​​.ಎಂ ಕೃಷ್ಣ ಸಿಎಂ ಆಗಿದ್ದಾಗ ಏನೇನು ಮಾಡಿದ್ರಿ. ಬಿಜೆಪಿ ಅವಧಿಯ ಸರ್ಕಾರದಲ್ಲಿ ಇದುವರೆಗೂ ಒಂದೇ ಒಂದು ಕೋಮು ಗಲಭೆಯಾಗಿಲ್ಲ. ಕುರ್ಚಿಗೋಸ್ಕರ ಬೆಂಕಿ ಹಚ್ಚಿದ್ದು ನೀವು. ನಮ್ಮದು ದೀಪ ಹಚ್ಚುವ ಸಂಸ್ಕೃತಿ. ಕಾಂಗ್ರೆಸ್​​ನವರದ್ದು ಕೊಳ್ಳಿ ಇಡುವ ಸಂಸ್ಕೃತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details