ಕರ್ನಾಟಕ

karnataka

ETV Bharat / city

ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕು.. ಶಾಸಕ ಜ್ಯೋತಿಗಣೇಶ್ ಸೂಚನೆ.. - ಪೌರಕಾರ್ಮಿಕರಿಗೆ ಶಾಸಕ ಜ್ಯೋತಿಗಣೇಶ್ ಸೂಚನೆ

ತುಮಕೂರು ಮಹಾನಗರ ಪಾಲಿಕೆಯಿಂದ ಸ್ವಚ್ಛ ಮಾಡಲು ನೀಡಲಾಗಿರುವ ಪರಿಕರಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಿ, ಇಲ್ಲವಾದಲ್ಲಿ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

ಜ್ಯೋತಿಗಣೇಶ್

By

Published : Sep 23, 2019, 7:27 PM IST

ತುಮಕೂರು: ಮಹಾನಗರ ಪಾಲಿಕೆಯಿಂದ ಸ್ವಚ್ಛ ಮಾಡಲು ನೀಡಲಾಗಿರುವ ಪರಿಕರಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಿ, ಇಲ್ಲವಾದಲ್ಲಿ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಳ್ಳುತ್ತೀರಿ ಎಂದು ಶಾಸಕ ಜಿ ಬಿ ಜ್ಯೋತಿಗಣೇಶ್ ಪೌರ ಕಾರ್ಮಿಕರಿಗೆ ಸಲಹೆ ನೀಡಿದರು.

ಬಾಲ ಭವನದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ..

ತುಮಕೂರು ಜಿಲ್ಲಾಡಳಿತ ಮತ್ತು ಮಹಾ ನಗರಪಾಲಿಕೆ ವತಿಯಿಂದ ನಗರದ ಬಾಲ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ದೇಶದ ಸ್ವಚ್ಛತೆಯನ್ನು ಕಾಪಾಡುವಲ್ಲಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ದೇಶದ ವೀರರು. ಪೌರಕಾರ್ಮಿಕರಿಗೆ ಇರುವಂತಹ ಹಕ್ಕುಗಳನ್ನು ನೀವೂ ತಿಳಿದುಕೊಳ್ಳಬೇಕು. ವಿಷಕರ ವಾತಾವರಣದಲ್ಲಿ ಕೆಲಸ ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆಯಾಗುತ್ತದೆ, ಹಾಗಾಗಿ ಸರ್ಕಾರದಿಂದ ಮತ್ತು ಮಹಾ ನಗರಪಾಲಿಕೆ ವತಿಯಿಂದ ನೀಡಲಾಗಿರುವ ಪರಿಕರಗಳನ್ನು ಬಳಸಿಕೊಂಡು ಕೆಲಸ ನಿರ್ವಹಿಸಿ ಎಂದರು.

ಪ್ರಾರಂಭದ ದಿನಗಳಲ್ಲಿ ಪರಿಕರಗಳ ಬಳಕೆ ಅಭ್ಯಾಸವಿಲ್ಲದೆ ಕೆಲಸ ಮಾಡಲು ತೊಂದರೆಯಾಗಬಹುದು. ಆದರೆ, ನಿಮ್ಮ ಆರೋಗ್ಯದ ದೃಷ್ಟಿಯಿಂದ ಪಾಲಿಕೆಯ ಮೂಲಕ ನೀಡಲಾಗಿರುವ ಪರಿಕರಗಳನ್ನು ಬಳಸಿ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಆರೋಗ್ಯವನ್ನು ನೀವೇ ಹಾಳು ಮಾಡಿಕೊಂಡಂತೆ ಆಗುತ್ತದೆ ಎಂದು ಪೌರಕಾರ್ಮಿಕರಿಗೆ ಸಲಹೆ ನೀಡಿದರು.

ಇನ್ನು, ಪೌರಕಾರ್ಮಿಕರು ಸಂಬಳವಿಲ್ಲದೆ ಮಹಾನಗರಪಾಲಿಕೆಯ ಮುಂಭಾಗ ಪ್ರತಿಭಟನೆ ಮಾಡಿದಂತಹ ನಿದರ್ಶನಗಳನ್ನು ಕಂಡಿದ್ದೇನೆ. ಆ ರೀತಿ ಮಹಾ ನಗರಪಾಲಿಕೆ ಕ್ರಮ ಕೈಗೊಳ್ಳುವ ಮೂಲಕ ಆಯಾ ತಿಂಗಳ ಸಂಬಳವನ್ನು ಆಯಾ ತಿಂಗಳಿನಲ್ಲಿಯೇ ದೊರೆಯುವಂತೆ ಮಾಡಬೇಕು. ಜೊತೆಗೆ ಮಹಾ ನಗರಪಾಲಿಕೆ ವತಿಯಿಂದ ಸರ್ಕಾರದ ಮೂಲಕ ಪೌರ ಕಾರ್ಮಿಕರಿಗೆ ವಿಮೆ ಸೌಲಭ್ಯವನ್ನು ಮಾಡಿಸಿಕೊಡಿ ಎಂದರು.

ABOUT THE AUTHOR

...view details