ತುಮಕೂರು:ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ಶಾಸಕ ಗೌರಿಶಂಕರ್ ವಿಚಾರಿಸಿದರು.
ಮಾರಾಮಾರಿಯಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಗೌರಿಶಂಕರ್ - Tumkur News
ಶುಕ್ರವಾರ ರಾತ್ರಿ ತುಮಕೂರು ತಾಲೂಕಿನ ಹೊನ್ನೆನಹಳ್ಳಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯಲ್ಲಿ ಗಾಯಗೊಂಡಿದ್ದವರ ಆರೋಗ್ಯ ಸ್ಥಿತಿಯನ್ನು ಶಾಸಕ ಗೌರಿಶಂಕರ್ ವಿಚಾರಿಸಿದರು.
ಮಾರಾಮಾರಿಯಲ್ಲಿ ಗಾಯಗೊಂಡವರ ಆರೋಗ್ಯ ಸ್ಥಿತಿ ವಿಚಾರಿಸಿದ ಶಾಸಕ ಗೌರಿಶಂಕರ್
ಬಳಿಕ ಜಿಲ್ಲಾಸ್ಪತ್ರೆಗೆ ತೆರಳಿ ಶಸ್ತ್ರಚಿಕಿತ್ಸಕ ಡಾ.ವೀರಭದ್ರಪ್ಪ ಅವರ ಬಳಿ ಗಾಯಾಳುಗಳ ಆರೋಗ್ಯದ ಸ್ಥಿತಿಯ ಮಾಹಿತಿ ಪಡೆದರು. ಬಳಿಕ ಘಟನೆ ನಡೆದ ತುಮಕೂರು ತಾಲೂಕಿನ ಮನೆಗಳಿಗೂ ಭೇಟಿ ನೀಡಿ, ಕುಟುಂಬದವರಿಗೆ ಧೈರ್ಯ ತುಂಬಿದರು.
ಶುಕ್ರವಾರ ರಾತ್ರಿ ತುಮಕೂರು ತಾಲೂಕಿನ ಹೊನ್ನೆನಹಳ್ಳಿಯಲ್ಲಿ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ನಾಲ್ವರು ಗಾಯಗೊಂಡಿದ್ದರು.