ತುಮಕೂರು:ತೈಲ ಬೆಲೆ ಏರಿಕೆ ಸೇರಿದಂತೆ ಎಲ್ಲವನ್ನೂ ಪ್ರಧಾನಿ ನರೇಂದ್ರ ಮೋದಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
ತೈಲ ಬೆಲೆ ಏರಿಕೆ ಸೇರಿದಂತೆ ಎಲ್ಲವನ್ನೂ ಪ್ರಧಾನಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ: ವಿ.ಸೋಮಣ್ಣ ಸಿದ್ದಗಂಗಾ ಮಠಕ್ಕೆ ಭೇಟಿದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಇತಿ-ಮಿತಿಗಿಂತ ಅವರ ದೂರದೃಷ್ಟಿ ಚಿಂತನೆಯಿದೆ. ಯಾವ ರೀತಿಯ ತೀರ್ಮಾನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ ಎಂದರು.
ಓದಿ:'ಯಶ'ಸ್ವಿನಿ ವಿದ್ಯಾಭ್ಯಾಸಕ್ಕೆ ಮನೆಯಲ್ಲೇ ಪಾಠ: ಭರವಸೆ ನೀಡಿದ ಶಿಕ್ಷಣ ಸಚಿವರು
ಈ ಬಗ್ಗೆ ಸಿಎಂ ಕೂಡ ಆಸಕ್ತಿ ವಹಿಸಿದ್ದಾರೆ. ಪ್ರತಿದಿನ ಎಲ್ಲ ಸಂಘ ಸಂಸ್ಥೆಗಳನ್ನ ಕರೆದು ಮಾತನಾಡುತ್ತಿದ್ದಾರೆ. ಸಿಎಂಗೆ 50 ವರ್ಷದ ಅನುಭವವಿದೆ. ಸಾಮಾನ್ಯ ಜನರಿಗೆ ಆಗುವ ನೋವಿನ ಅರಿವು ಯಡಿಯೂರಪ್ಪ ಅವರಿಗಿದ್ದು, ಸೂಕ್ತ ಸಮಯದಲ್ಲಿ, ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.