ತುಮಕೂರು:ಸ್ವಾತಂತ್ರ್ಯ ದಿನಾಚರಣೆಯಂದು ದ್ವಜಸ್ತಂಭ ನೆಡುವಾಗ ವಿದ್ಯುತ್ ಸ್ವರ್ಶಿಸಿ ತುಮಕೂರು ತಾಲೂಕಿನ ಕರೀಕೆರೆ ಗ್ರಾಮದ ವಿದ್ಯಾರ್ಥಿ ಚಂದನ್ ಸಾವನ್ನಪ್ಪಿದ್ದನು. ಇಂದು ಮೃತ ಚಂದನ್ ಮನೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸ್ವಾತಂತ್ರ್ಯ ದಿನಾಚರಣೆಯಂದು ವಿದ್ಯಾರ್ಥಿ ಸಾವು: ಕುಟುಂಬಸ್ಥರಿಗೆ ಪರಿಹಾರ ನೀಡಿ, ಸಾಂತ್ವನ ಹೇಳಿದ ಸಚಿವ ನಾಗೇಶ್
ಸ್ವಾತಂತ್ರ್ಯ ದಿನಾಚರಣೆಯಂದು ಮೃತಪಟ್ಟ ವಿದ್ಯಾರ್ಥಿ ಚಂದನ್ ಕುಟುಂಬಸ್ಥರನ್ನು ಭೇಟಿ ಮಾಡಿದ ಸಚಿವ ನಾಗೇಶ್, ಅವರಿಗೆ ಸಾಂತ್ವನ ಹೇಳಿ ಪರಿಹಾರ ಒದಗಿಸಿದ್ದಾರೆ.
ಮೃತ ವಿದ್ಯಾರ್ಥಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಚಿವ ನಾಗೇಶ್
ಈ ವೇಳೆ ಮೃತಪಟ್ಟ ಯುವಕನ ಕುಟುಂಬದವರು ಸಚಿವ ನಾಗೇಶ್ ಅವರ ಬಳಿ ದುಃಖ ತೋಡಿಕೊಂಡರು. ಸಚಿವ ನಾಗೇಶ್, ಕುಟುಂಬಸ್ಥರನ್ನು ಸಂತೈಸಿದರು. ಬಳಿಕ ಘಟನೆ ನಡೆದ ಶಾಲಾ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಆಸ್ಪತ್ರೆಗೆ ತೆರಳಿ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಶಾಂಕ್ ಮತ್ತು ಪವನ್ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ:ಧ್ವಜ ಸ್ತಂಭ ನೆಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವು, ಶಿಕ್ಷಣ ಸಚಿವರ ಸಂತಾಪ