ತುಮಕೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬೆಳಕಿಗೆ ಬಂದ ನಂತರ ಆರೋಗ್ಯ ಕ್ಷೇತ್ರವು ಅತಿ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಎಲ್ಲ ತಾಲೂಕು ಕೇಂದ್ರಗಳಲ್ಲಿ ಬಹುತೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಹ ವೈದ್ಯಕೀಯ ಸೌಲಭ್ಯವಿದ್ದು, ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡು ಬಂದಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ವಿವಿಧ ರೀತಿಯ ರೋಗ ರುಜಿನಗಳಿಂದ ಬಳಲುತ್ತಿರುವ ರೋಗಿಗಳಿಗೆ ತಾಲೂಕು ಮಟ್ಟದಲ್ಲಿಯೇ ಚಿಕಿತ್ಸೆ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಮೊದಲು ಸಣ್ಣ ಪ್ರಮಾಣದ ವೈರಲ್ ಫೀವರ್ ಇದ್ದರೂ ತಾಲೂಕು ಕೇಂದ್ರದಿಂದ ಜಿಲ್ಲಾ ಕೇಂದ್ರಕ್ಕೆ ರೋಗಿಗಳು ಚಿಕಿತ್ಸೆಗೆ ಬರಬೇಕಿತ್ತು. ಆದ್ರೆ ಪ್ರಸ್ತುತ ತಾಲೂಕು ಆಸ್ಪತ್ರೆಗಳಲ್ಲಿಯೇ ವೈರಲ್ ಫೀವರ್ಗೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸುವಂತಹ ಆರೋಗ್ಯ ವ್ಯವಸ್ಥೆಯಿದೆ. ಹೀಗಾಗಿ ಜನರು ಕಾಯಿಲೆಗಳಿಂದ ಬಳಲುವುದು ತಪ್ಪುತ್ತಿದೆ ಎಂದರು.