ತುಮಕೂರು :ನಗರದ ಹೊರವಲಯದಲ್ಲಿರುವ ಮಲ್ಟಿ ಸ್ಪೆಷಾಲಿಟಿ ಪಶು ಆಸ್ಪತ್ರೆಯ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ರಾಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿಶೇಷವಾಗಿ ಉದ್ಘಾಟನೆ ಮಾಡಿದರು.
ಕಟ್ಟಡ ನಿರ್ಮಾಣಗೊಂಡು ಅನೇಕ ವರ್ಷಗಳಾಗಿದ್ದರೂ ಉದ್ಘಾಟನೆಗೊಂಡಿರಲಿಲ್ಲ. ಹೀಗಾಗಿ, ಇಂದು ಅಲಂಕೃತಗೊಂಡಿದ್ದ ಹಸು ಮತ್ತು ಕರುವಿಗೆ ಮಂಗಳಾರತಿ ಮಾಡಿದ ಸಚಿವರು, ಸಿಹಿ ಮತ್ತು ಹಣ್ಣು, ಅಕ್ಕಿ ತಿನ್ನಿಸುವ ಮೂಲಕ ಆಸ್ಪತ್ರೆಯನ್ನು ಅನಾವರಣಗೊಳಿಸಿದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇದೇ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಮಲ್ಟಿ ಸ್ಟೆಷಾಲಿಜಿ ಪಶು ಆಸ್ಪತ್ರೆ ಕಟ್ಟಡ ಸುಮಾರು 4 ವರ್ಷಗಳಿಂದ ಉದ್ಘಾಟನೆಗೊಂಡಿರಲಿಲ್ಲ. ಇಲ್ಲಿನ ಮೂಲಸೌಲಭ್ಯಗಳ ಕೊರತೆಯನ್ನು ನೀಗಿಸಲಾಗಿದೆ. ತಾಲೂಕು ಕೇಂದ್ರಗಳಿಂದ ಬರುವ ಪಶುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು ಎಂದರು.
ಇದು ರಾಜ್ಯದಲ್ಲೇ ಅತಿದೊಡ್ಡದಾದ ಎರಡನೇ ಆಸ್ಪತ್ರೆಯಾಗಿದೆ. ಪಶುಗಳಿಗೆ ಅತ್ಯುನ್ನತ ಚಿಕಿತ್ಸಾ ಸೌಲಭ್ಯಕ್ಕಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ, ಸ್ಥಳೀಯವಾಗಿಯೇ ಇದೀಗ ಸಿಗಲಿದೆ ಎಂದರು.
ಇದನ್ನೂ ಓದಿ:ಜಾರಕಿಹೊಳಿ-ಯತ್ನಾಳ್ ಲಂಚ್ ಮೀಟ್.. ಈಗ್ಲೇ ಸಂಪುಟ ಪುನಾರಚನೆ ಮಾಡದಿದ್ರೆ ಎಲ್ಲ ಬಿಜೆಪಿ ಬಿಟ್ಟು ಹೋಗ್ತಾರೆ.. ಯತ್ನಾಳ್ ಎಚ್ಚರಿಕೆ