ತುಮಕೂರು :ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲೆ ಮಾಡದೆ ಬೇಜವಾಬ್ದಾರಿತನ ತೋರಿದ ಚಿಕ್ಕನಾಯಕನಹಳ್ಳಿ ಪುರಸಭೆ ಆಡಳಿತ ಅಧಿಕಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಸೋಂಕಿತರ ಕುರಿತ ನಿರ್ಲಕ್ಷ್ಯ: ಪುರಸಭೆ ಆಡಳಿತಾಧಿಕಾರಿ ವಿರುದ್ಧ ಗರಂ ಸಚಿವ ಮಾಧುಸ್ವಾಮಿ - ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು
ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಬೇಕು ಎಂಬ ನಿಯಮ ಇದೆ. ಆದ್ರೆ, ಪುರಸಭೆ ಆಡಳಿತ ಅಧಿಕಾರಿ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಪ್ಪು ಅರಿವಾಗುತ್ತಿದ್ದಂತೆ ಪುರಸಭೆ ಆಡಳಿತ ಅಧಿಕಾರಿ ಸಚಿವರ ಕ್ಷಮೆ ಕೋರಿದರು..
ಸಚಿವ ಮಾಧುಸ್ವಾಮಿ
ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹಾಜರಿದ್ದ ಚಿಕ್ಕನಾಯಕನಹಳ್ಳಿ ಪುರಸಭೆ ಆಡಳಿತಾಧಿಕಾರಿಯು 117 ಸೋಂಕಿತರನ್ನು ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡದೆ ಹೋಮ್ ಐಸೋಲೇಷನ್ಗೆ ಅವಕಾಶ ಮಾಡಿಕೊಟ್ಟಿದ್ದರು.
ಸೋಂಕು ದೃಢಪಟ್ಟ ತಕ್ಷಣ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲು ಮಾಡಬೇಕು ಎಂಬ ನಿಯಮ ಇದೆ. ಆದ್ರೆ, ಪುರಸಭೆ ಆಡಳಿತ ಅಧಿಕಾರಿ ಬೇಜವಾಬ್ದಾರಿತನದಿಂದ ನಡೆದುಕೊಂಡಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಪ್ಪು ಅರಿವಾಗುತ್ತಿದ್ದಂತೆ ಪುರಸಭೆ ಆಡಳಿತ ಅಧಿಕಾರಿ ಸಚಿವರ ಕ್ಷಮೆ ಕೋರಿದರು.