ಕರ್ನಾಟಕ

karnataka

ETV Bharat / city

ಇಂದಿರಾ ಕ್ಯಾಂಟೀನ್​ಗೆ ಶಿವಕುಮಾರ ಶ್ರೀ ಹೆಸರಿಟ್ಟರೆ ನನಗೂ ಸಂತೋಷ : ಸಚಿವ ಮಾಧುಸ್ವಾಮಿ

ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ರಾಜ್ಯಾದ್ಯಂತ ದಾಸೋಹಕ್ಕೆ ಪೂರ್ವಕವಾಗಿ ಶಕ್ತಿ ನೀಡುವಂತಹ ಕೆಲಸವನ್ನು ಮಾಡಲಿದ್ದೇವೆ. ಈಗಾಗಲೇ ದಾಸೋಹದ ರೂಪದಲ್ಲಿ ಶಾಲೆಗಳಲ್ಲಿ ಆರಂಭಿಸಲಾಗಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು..

Madhuswamy
ಸಚಿವ ಮಾಧುಸ್ವಾಮಿ

By

Published : Jan 22, 2022, 1:38 PM IST

Updated : Jan 22, 2022, 1:58 PM IST

ತುಮಕೂರು :ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್​ಗೆ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರನ್ನು ನಾಮಕರಣ ಮಾಡಿದರೆ ನನ್ನಷ್ಟು ಸಂತೋಷಪಡುವರು ಯಾರು ಇಲ್ಲ. ಆದರೆ, ಕಾಂಗ್ರೆಸ್​​ನವರು ಇಟ್ಟಿರುವ ಇಂದಿರಾ ಕ್ಯಾಂಟೀನ್ ಹೆಸರನ್ನು ಬದಲಾಯಿಸಿದರೆ ಸಾಮಾನ್ಯವಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಇಂದಿರಾ ಕ್ಯಾಂಟೀನ್​ಗೆ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಹೆಸರು ಇಡುವ ಚಿಂತನೆ ಸದ್ಯಕ್ಕೆ ಇಲ್ಲ. ಆದರೆ, ಇದನ್ನು ವಿವಾದ ಮಾಡಿಕೊಂಡು ಹೋಗುವುದಕ್ಕೂ ಆಗುವುದಿಲ್ಲ ಎಂದರು.

ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಸಚಿವ ಮಾಧುಸ್ವಾಮಿ

ಇದನ್ನೂ ಓದಿ: ಶ್ರೀ ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ : ಗದ್ದುಗೆ ದರ್ಶನ ಪಡೆಯಲು ಭಕ್ತ ಸಾಗರ

ಶ್ರೀ ಶಿವಕುಮಾರ ಸ್ವಾಮೀಜಿಗಳು ದಾಸೋಹ ಪ್ರಭು ಆಗಿದ್ದಾರೆ, ದಾಸೋಹಕ್ಕೆ ಅವರಷ್ಟು ಒತ್ತು ನೀಡಿದ ಮತ್ತೊಬ್ಬರು ಈ ನಾಡಿನಲ್ಲಿ ಇಲ್ಲ. ಹೀಗಾಗಿ, ಅವರ ಪುಣ್ಯಸ್ಮರಣೆ ದಿನವನ್ನು 'ದಾಸೋಹ ದಿನ' ಎಂದು ಆಚರಿಸುವ ಮೂಲಕ ದಾಸೋಹಕ್ಕೆ ಮನ್ನಣೆ ನೀಡಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಸಿದ್ದಪಡಿಸಲಾಗುವುದು. ರಾಜ್ಯಾದ್ಯಂತ ದಾಸೋಹಕ್ಕೆ ಪೂರ್ವಕವಾಗಿ ಶಕ್ತಿ ನೀಡುವಂತಹ ಕೆಲಸವನ್ನು ಮಾಡಲಿದ್ದೇವೆ. ಈಗಾಗಲೇ ದಾಸೋಹದ ರೂಪದಲ್ಲಿ ಶಾಲೆಗಳಲ್ಲಿ ಆರಂಭಿಸಲಾಗಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.

ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 22, 2022, 1:58 PM IST

For All Latest Updates

TAGGED:

ABOUT THE AUTHOR

...view details