ಕರ್ನಾಟಕ

karnataka

ETV Bharat / city

ಬಿಕ್ಕೆಗುಡ್ಡ ಕುಡಿವ ನೀರು ಯೋಜನೆಗೆ ಭೂಮಿ ಕೊಡುವವರಿಗೆ ಸೂಕ್ತ ಪರಿಹಾರ: ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ನೀರು ಹರಿಸುವ ಪೈಪ್​ಲೈನ್ ಕಾಮಗಾರಿ ವೇಳೆ ಜಮೀನಿನಲ್ಲಿರುವ ಗಿಡ-ಮರ, ಬೆಳೆಗಳಿಗೆ ಹಾನಿಯುಂಟಾದರೆ ಮಾರ್ಗಸೂಚಿ ಅನ್ವಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಿಗದಿಪಡಿಸಿದ ದರದಲ್ಲಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ರೈತರಿಗೆ ತಿಳಿಸಿದರು.

Bikkegudda drinking water project
ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ಭೂಮಿ ಕೊಡುವವರಿಗೆ ಸೂಕ್ತ ಪರಿಹಾರ: ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ

By

Published : Apr 3, 2021, 7:10 AM IST

ತುಮಕೂರು:ಜಿಲ್ಲೆಯ ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಕುಡಿಯುವ ನೀರು ಯೋಜನೆಗೆ ಭೂ ಸ್ವಾಧೀನ ಮಾಡಿಕೊಳ್ಳುವ ಜಮೀನು ಹಾಗೂ ಬೆಳೆಗಳಿಗೆ ಹೆಚ್ಚಿನ ಪರಿಹಾರ ಒದಗಿಸಲಾಗುವುದು ಎಂದು ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬಿಕ್ಕೆಗುಡ್ಡ ಕುಡಿಯುವ ನೀರಿನ ಯೋಜನೆಯ ಸಂಬಂಧ ರೈತರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಆರಂಭದಲ್ಲಿ ತೆರೆದ ಕಾಲುವೆ ಮೂಲಕ ನೀರು ಹರಿಸಲು 15 ಮೀಟರ್ ಭೂ - ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಲಾಗಿತ್ತು. ಆದರೆ, ಈಗ ಪೈಪ್​ಲೈನ್ ಮೂಲಕ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಹಿನ್ನೆಲೆಯಲ್ಲಿ 6 ಮೀಟರ್ ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗುವುದು. ನೀರು ಹರಿಸುವ ಪೈಪ್​ಲೈನ್ ಕಾಮಗಾರಿ ವೇಳೆ ಜಮೀನಿನಲ್ಲಿರುವ ಗಿಡ - ಮರ, ಬೆಳೆಗಳಿಗೆ ಹಾನಿಯುಂಟಾದರೆ ಮಾರ್ಗಸೂಚಿ ಅನ್ವಯ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ನಿಗದಿಪಡಿಸಿದ ದರದಲ್ಲಿ ಹೆಚ್ಚಿನ ಪರಿಹಾರ ಕೊಡಿಸಲಾಗುವುದು. ಭೂ-ಸ್ವಾಧೀನಕ್ಕೆ ರೈತರು ಸಮ್ಮತಿ ಸೂಚಿಸಿದರೆ, ಪರಿಹಾರಕ್ಕಾಗಿ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಇಲ್ಲದಿದ್ದರೆ, ಸ್ವಾಧೀನ ಪ್ರಕ್ರಿಯೆಯಂತೆಯೇ ಪರಿಹಾರ ನೀಡಲಾಗುವುದು ಎಂದರು.

ಈ ಪ್ರದೇಶದಲ್ಲಿ ಅಡಕೆ, ತೆಂಗಿನ ತೋಟಗಳು ಸಮೃದ್ಧವಾಗಿವೆ. ನಾನು ಸ್ಥಳ ಪರಿಶೀಲನೆ ಮಾಡಿದ್ದೇನೆ. ಯೋಜನೆಯಿಂದ ಬಾಧಿತವಾಗುವ ಗಿಡ - ಮರ ಬೆಳೆಗಳಿಗೆ ಹೆಚ್ಚಿನ ಪರಿಹಾರ ಕಲ್ಪಿಸಲಾಗುವುದು. ಅಲ್ಲದೇ, ಪಪ್ಪಾಯಿ (ಪರಂಗಿ) ಮತ್ತು ಬಾಳೆ ಬೆಳೆಗಳಿಗೂ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಬಿಕ್ಕೆಗುಡ್ಡ ಭಾಗದ ಜನರ ಅನುಕೂಲಕ್ಕಾಗಿ ಈ ಯೋಜನೆ ಕೈಗೊಳ್ಳಲಾಗಿದೆ. ಹಾಗಾಗಿ, ರೈತರು ಇದಕ್ಕೆ ಸಮ್ಮತಿ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ಬಿಕ್ಕೆಗುಡ್ಡ ಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಪಪ್ಪಾಯಿ ಹಾಗೂ ಬಾಳೆ ಬೆಳೆಗಳಿಗೂ ಸೆಕ್ಷನ್ 2ರಂತೆ ದರ ನಿಗದಿ ಮಾಡಿ ಸೂಕ್ತ ಪರಿಹಾರ ನೀಡಲಾಗುವುದು ಎಂದರು.

ಓದಿ:ಕಲಬುರಗಿ: ಹೋಳಿ ಹಬ್ಬದಂದು ರಕ್ತದೋಕುಳಿ ಹರಿಸಿದ್ದ ಮೂವರು ಅರೆಸ್ಟ್​!

ABOUT THE AUTHOR

...view details