ಕರ್ನಾಟಕ

karnataka

ETV Bharat / city

ಧಾರ್ಮಿಕ ಗ್ರಂಥಗಳಿಗೆ ಭಗವದ್ಗೀತೆ ಹೋಲಿಕೆಯೇ ತಪ್ಪು: ಸಚಿವ ನಾಗೇಶ್ - ಭಗವದ್ಗೀತೆ ಬಗ್ಗೆ ಸಚಿವ ಬಿ ಸಿ ನಾಗೇಶ್​ ಹೇಳಿಕೆ

ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಕಲಿಸಲು ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸಲು ಸರ್ಕಾರ ಮುಂದಾಗಿದೆ. ಇದರ ಹಿಂದೆ ಯಾವುದೇ ರಾಜಕೀಯ ಇಲ್ಲ. ಭಗವದ್ಗೀತೆ ಧಾರ್ಮಿಕ ಗ್ರಂಥವಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ಹೇಳಿದರು.

minister-b-c-nagesh
ಸಚಿವ ನಾಗೇಶ್

By

Published : May 1, 2022, 4:04 PM IST

Updated : May 1, 2022, 5:02 PM IST

ತುಮಕೂರು:ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಬೋಧಿಸಲು ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಪಠ್ಯಪುಸ್ತಕ ಸಮಿತಿ ಮುಂದಾಗಿದೆ. ಭಗವದ್ಗೀತೆಯನ್ನು ಬೇರೆ ಧಾರ್ಮಿಕ ಗ್ರಂಥಗಳಿಗೆ ಹೋಲಿಕೆ ಮಾಡುವುದು ತಪ್ಪು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಭಿಪ್ರಾಯಪಟ್ಟರು.

ಧಾರ್ಮಿಕ ಗ್ರಂಥಗಳಿಗೆ ಭಗವದ್ಗೀತೆ ಹೋಲಿಕೆಯೇ ತಪ್ಪು: ಸಚಿವ ನಾಗೇಶ್

ಜಿಲ್ಲೆಯ ಶಿರಾ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಗವದ್ಗೀತೆಯು ಧರ್ಮ ಗ್ರಂಥವಲ್ಲ. ಅದು ಮೌಲ್ಯಗಳನ್ನು ಬಿತ್ತರಿಸುವ ಭಂಡಾರ. ಇದು ಮಕ್ಕಳಿಗೆ ನೈತಿಕತೆಯನ್ನು ಕಲಿಸಿಕೊಡುತ್ತದೆ. ಸಂಶೋಧಕ ಆಲ್ಬರ್ಟ್ ಐನ್​ಸ್ಟೀನ್​ ನನ್ನೆಲ್ಲಾ ಸಂಶೋಧನೆಗೆ ಮತ್ತು ಕೆಲಸಕ್ಕೆ ಭಗವದ್ಗೀತೆ ಸ್ಪೂರ್ತಿಯಾಗಿದೆ ಎಂದಿದ್ದಾರೆ. ಆತ ಆರ್​ಎಸ್​ಎಸ್, ಬಿಜೆಪಿ ಕಾರ್ಯಕರ್ತನೂ ಅಲ್ಲ, ಹಿಂದೂ ಮುಖಂಡನೂ ಅಲ್ಲ. ಆದರೂ ಭಗವದ್ಗೀತೆಯನ್ನು ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.

ಭಗವದ್ಗೀತೆಯನ್ನು ಧಾರ್ಮಿಕ ಗ್ರಂಥದ ಸ್ವರೂಪಕ್ಕೆ ಹೋಲಿಕೆ ಮಾಡುತ್ತಿರುವ ಹುನ್ನಾರ ನಡೆಯುತ್ತಿದೆ. ಇದೊಂದು ವೋಟ್​ ಬ್ಯಾಂಕ್ ರಾಜಕಾರಣವಾಗಿದೆ ಎಂದು ಶಿಕ್ಷಣ ಸಚಿವರು ಟೀಕಿಸಿದರು.

ಓದಿ:ಸಾರಿಗೆ ನಿಗಮದ ಇತಿಹಾಸದಲ್ಲೇ ಪ್ರಥಮ ಬಾರಿಗೆ 7,200 ನೌಕರರ ಶಿಸ್ತು ಪ್ರಕರಣ ಮನ್ನಾ‌

Last Updated : May 1, 2022, 5:02 PM IST

For All Latest Updates

TAGGED:

ABOUT THE AUTHOR

...view details