ತುಮಕೂರು:ಒಮ್ಮೆ ಲೋಕಸಭೆ ಸದಸ್ಯನನ್ನಾಗಿ ಮಾಡಬೇಕೆಂಬ ಕಂಡೀಷನ್ ಹಾಕಿ ಚಿತ್ರನಟ ಜಗ್ಗೇಶ್ ಬಿಜೆಪಿ ಪಕ್ಷಕ್ಕೆ ಸೇರಿದ್ದರು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ. ತುರುವೇಕೆರೆ ತಾಲೂಕು ಮಾಯಸಂದ್ರ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನನಗೆ ಅಧಿಕಾರ ದುಡ್ಡು ಯಾವುದು ಬೇಡ ಎಂದಿದ್ದರು. ಜಗ್ಗೇಶ್ ಎಂಎಲ್ಸಿ ಆಗಬೇಕು, ಕರ್ನಾಟಕದಲ್ಲಿಯೇ ಉಳಿಸಿಕೊಳ್ಳಬೇಕು ಎಂದು ಕೊಂಡಿದ್ದೆವು. ಆದರೆ, ಪಕ್ಷ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದೆ ಎಂದರು.
ಲೋಕಸಭೆ ಸದಸ್ಯನನ್ನಾಗಿ ಮಾಡಬೇಕೆಂದು ಜಗ್ಗೇಶ್ ಕಂಡಿಷನ್ ಹಾಕಿದ್ದರು: ಸಚಿವ ಆರ್ ಅಶೋಕ್ - ತುಮಕೂರಿನಲ್ಲಿ ಸಚಿವ ಅಶೋಕ್ ಪ್ರತಿಕ್ರಿಯೆ
ಲೋಕಸಭೆ ಸದಸ್ಯನನ್ನಾಗಿ ಮಾಡಬೇಕೆಂದು ಜಗ್ಗೇಶ್ ಕಂಡಿಷನ್ ಹಾಕಿದ್ದರು ಎಂದು ಸಚಿವ ಆರ್.ಅಶೋಕ್ ತುಮಕೂರಿನಲ್ಲಿ ಹೇಳಿದ್ದಾರೆ.
ಸಚಿವ ಆರ್ ಅಶೋಕ್
ಓದಿ:ಜಗ್ಗೇಶ್ ಬಳಿಕ ಮತ್ತೆ ಬರ್ತಿದೆ 'ಮಠ'... ಸಿನೆಮಾದಲ್ಲಿದ್ದಾರೆ ಖ್ಯಾತ ನಟರು
ಮೊದಲೆಲ್ಲಾ ಏಕವಚನದಲ್ಲಿ ಜಗ್ಗೇಶ್ ಬಗ್ಗೆ ಮಾತಡನಾಡುತ್ತಿದ್ದೆ, ಆದರೆ, ಈಗ ಅವರು ದೇಶದ ರಾಜ್ಯಸಭಾ ಸದಸ್ಯರಾಗಿದ್ದಾರೆ. ದೇಶದ ಗೌರವಾನ್ವಿತ ಜಗ್ಗೇಶ ಆಗಿದ್ದಾರೆ. ಅವರ ಮನೆ ಗೃಹ ಪ್ರವೇಶಕ್ಕೆ ಬಂದಿದ್ದೇನೆ. 2008ರಲ್ಲಿ ಬಿಜೆಪಿಗೆ ಅವರನ್ನು ಕರೆದುಕೊಂಡು ಬಂದಿದ್ದೇವೆ. ನಮ್ಮ ಪಕ್ಷಕ್ಕೆ ಸೇರಿದ ಮೇಲೆ ಬಹಳಷ್ಟು ಆಪಾದನೆ, ತೆಗಳಿಕೆ ಆಗಿದೆ. ನಂತರ ಸ್ವಂತ ಊರು ತುರುವೇಕೆರೆ ತಾಲೂಕಿನ ಜಡೆ ಮಾಯಸಂದ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುವಂತೆ ಜಗ್ಗೇಶ್ ಕೇಳಿಕೊಂಡಿದ್ದಾರೆ ಎಂದರು.
Last Updated : Jun 18, 2022, 2:06 PM IST