ಕರ್ನಾಟಕ

karnataka

ETV Bharat / city

ಕೆಡಿಪಿ ಸಭೆಯಲ್ಲಿ ಅಧಿಕಾರಿಗೆ ಕೆಟ್ಟ ಪದಗಳಲ್ಲಿ ತರಾಟೆ: ಸಚಿವ ಮಾಧುಸ್ವಾಮಿ ಸ್ಪಷ್ಟನೆ ಹೀಗಿದೆ.. - ಮಾಧುಸ್ವಾಮಿ ಅಸಭ್ಯ ಪದ ಬಳಕೆಗೆ

600 ಕೋಟಿಯಷ್ಟು ಯೋಜನೆಯ ಕೆಲಸ ಹಾಗೇ ಖಾಲಿ ಬಿದ್ದಿದೆ. ಎಷ್ಟು ಸಾರಿ ಸಹಿಸಿಕೊಳ್ಳೋದು, ಎಲ್ಲಿಯವರೆಗೆ ಸಹಿಸಿಕೊಳ್ಳೋದು ಹೇಳಿ?, ಅದಕ್ಕೆ ಕೆಟ್ಟಪದ ಬಳಸಿದ್ದೇನೆ. ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ಳುತ್ತಾರೆ ಎಂದು ಅಸಭ್ಯ ಪದ ಬಳಕೆ ವಿಚಾರವಾಗಿ ಸಚಿವ ಮಾಧುಸ್ವಾಮಿ ಸ್ಪಷ್ಟತೆ ನೀಡಿದರು.

madhuswamy-gave-clarification-on-rude-word-usage-on-official
ಮಾಧುಸ್ವಾಮಿ

By

Published : Jan 7, 2021, 8:36 PM IST

ತುಮಕೂರು:ಸಚಿವ ಮಾಧುಸ್ವಾಮಿ ಕೆಡಿಪಿ ಸಭೆಯಲ್ಲಿ ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

ಸಚಿವ ಮಾಧುಸ್ವಾಮಿ ಸ್ಪಷ್ಟನೆ

ಜಿ.ಪಂ ಇಂಜಿನಿಯರಿಂಗ್ ವಿಭಾಗದಲ್ಲಿ ಯಾವುದೇ ಕೆಲಸಗಳು ನಡೆದೇ ಇಲ್ಲ. ಕಳೆದ ತಿಂಗಳು 4ರಂದೇ ನಾನು ಸೂಚನೆ ನೀಡಿದ್ದೆ. ಸೆಪ್ಟೆಂಬರ್, ಅಕ್ಟೋಬರ್​ನಲ್ಲಿ ಆಗಬೇಕಿರುವ ಕೆಲಸ ಇನ್ನೂ ಆಗಿಲ್ಲ. ಯಾವುದೇ ಒಂದು ಕೆಲಸ ಶುರುಮಾಡಿಲ್ಲ. ಅಲ್ಲದೆ ಜಿಲ್ಲಾ ಪಂಚಾಯತ್ ಇಂಜಿನಿಯರ್​ಗಳು ಯಾರೂ ಕೆಲಸ ಮಾಡಿಲ್ಲ.

ಓದಿ: ಅಸಭ್ಯ ಪದಗಳಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ: ವಿಡಿಯೋ

600 ಕೋಟಿಯಷ್ಟು ಯೋಜನೆಯ ಕೆಲಸ ಹಾಗೇ ಖಾಲಿ ಬಿದ್ದಿದೆ. ಎಷ್ಟು ಸಾರಿ ಸಹಿಸಿಕೊಳ್ಳೋದು, ಎಲ್ಲಿಯವರೆಗೆ ಸಹಿಸಿಕೊಳ್ಳೋದು ಹೇಳಿ? ಅದಕ್ಕೆ ಕೆಟ್ಟಪದ ಬಳಸಿದ್ದೇನೆ. ಅಧಿಕಾರಿಗಳ ಮೇಲೆ ಆ್ಯಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ಳುತ್ತಾರೆ ಎಂದು ಅಸಭ್ಯ ಪದ ಬಳಕೆ ವಿಚಾರವಾಗಿ ಸ್ಪಷ್ಟನೆ ನೀಡಿದರು.

ABOUT THE AUTHOR

...view details