ತುಮಕೂರು: ಕೋಳಿಗಳನ್ನು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಸ್ಥಳದಲ್ಲೇ ನೂರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿರುವ ಘಟನೆ ಗುಬ್ಬಿ ಪಟ್ಟಣದ ಹೊರವಲಯದ ಸಿಂಗೋನಹಳ್ಳಿ ಬ್ರಿಡ್ಜ್ ಬಳಿ ನಡೆದಿದೆ.
ರಸ್ತೆ ಅಪಘಾತ : ಚಾಲಕ ಸೇರಿದಂತೆ ಸ್ಥಳದಲ್ಲೇ ನೂರಾರು ಕೋಳಿಗಳು ಸಾವು - ಸಿಂಗೋನಹಳ್ಳಿ ಬ್ರಿಡ್ಜ್
ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಸಿಂಗೋನಹಳ್ಳಿ ಬ್ರಿಡ್ಜ್ ಬಳಿ ಕೋಳಿಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಯೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿದಂತೆ ಸ್ಥಳದಲ್ಲೇ ನೂರಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿವೆ..
![ರಸ್ತೆ ಅಪಘಾತ : ಚಾಲಕ ಸೇರಿದಂತೆ ಸ್ಥಳದಲ್ಲೇ ನೂರಾರು ಕೋಳಿಗಳು ಸಾವು Road accident](https://etvbharatimages.akamaized.net/etvbharat/prod-images/768-512-15379032-thumbnail-3x2-lek.jpg)
Road accident
ಸಿಂಗೋನಹಳ್ಳಿ ಸೇತುವೆ ಬಳಿ ಕೋಳಿಗಳನ್ನ ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಲಾರಿಯೊಂದು ಮುಂದೆ ಹೋಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಾಲಕ ಮೃತಪಟ್ಟಿದ್ದು, ಲಾರಿಯಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನ ತುಮಕೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಕುರಿತು ಗುಬ್ಬಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತುಮಕೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತ
ಇದನ್ನೂ ಓದಿ:ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಕಾಳಗ : ಮೂವರು ಪಾಕಿಸ್ತಾನಿ ಉಗ್ರರ ಎನ್ಕೌಂಟರ್