ಕರ್ನಾಟಕ

karnataka

ETV Bharat / city

ಗ್ರಾಹಕನ ಬಳಿ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಮಚ್ಚಿನಿಂದ ಹಲ್ಲೆ, ಸಾವು: ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ! - ತುಮಕೂರಿನಲ್ಲಿ ಕೊಲೆ

2019ರ ಜೂನ್​ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

Life imprisonment for murder case offenders
ತುಮಕೂರು ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ

By

Published : Jan 15, 2022, 12:13 PM IST

ತುಮಕೂರು: ಸಿಗರೇಟು ಖರೀದಿಸಿದ ಗ್ರಾಹಕನಿಗೆ ಹಣ ಕೇಳಿದ್ದಕ್ಕೆ ಅಂಗಡಿ ಮಾಲೀಕನನ್ನೇ ಹತ್ಯೆ ಮಾಡಿದ ಆರೋಪಿಗಳಿಗೆ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್ಎಸ್ ಮಲ್ಲಿಕಾರ್ಜುನಸ್ವಾಮಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ವಿನಾಯಕ ಮತ್ತು ರಾಘವೇಂದ್ರ ಅಪರಾಧಿಗಳು.

ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಗೊಲ್ಲರಹಟ್ಟಿಯಲ್ಲಿ ಮಹಾಲಿಂಗಯ್ಯ ಮತ್ತು ಮುರಳೀಧರ ಚಿಲ್ಲರೆ ವ್ಯಾಪಾರ ನಡೆಸುತ್ತಿದ್ದರು. 2019ರ ಜೂನ್ 21ರ ರಾತ್ರಿ 7.30ರ ಸುಮಾರಿಗೆ ಅಂಗಡಿಗೆ ಬಂದಿದ್ದ ವಿನಾಯಕ ಮತ್ತು ರಾಘವೇಂದ್ರ ಎಂಬುವರು ಸಿಗರೇಟು ಖರೀದಿಸಿದ್ದರು.

ಇದನ್ನೂ ಓದಿ:ಕೋಣಂದೂರು ಗ್ರಾಮ ಪಂಚಾಯಿತಿಯಲ್ಲಿ ಡಿಶುಂ..ಡಿಶುಂ.. ಸದಸ್ಯರ ಹೊಡೆದಾಟದ ವಿಡಿಯೋ ವೈರಲ್...!

ಈ ವೇಳೆ, ಅಂಗಡಿ ಮಾಲೀಕ ಬಾಕಿ ಹಣ ಕೇಳಿದ್ದಕ್ಕೆ ವಿನಾಯಕ ಮತ್ತು ರಾಘವೇಂದ್ರ ಮನೆಯಿಂದ ಮಚ್ಚನ್ನು ತಂದು ಮಹಾಲಿಂಗಯ್ಯ, ಮುರಳೀಧರ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮುರಳೀಧರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ABOUT THE AUTHOR

...view details