ಕರ್ನಾಟಕ

karnataka

ETV Bharat / city

ಚಿರತೆ ಅನುಮಾನಾಸ್ಪದ ಸಾವು... ಕಾಲುಗಳನ್ನು ಕತ್ತರಿಸಿ, ಹಲ್ಲು ಕಿತ್ತಿರುವ ಕಿಡಿಗೇಡಿಗಳು - ಪಾವಗಡದಲ್ಲಿ ಚಿರತೆಯೊಂದು ಅನುಮಾನಸ್ಪದವಾಗಿ ಸಾವು

ಪಾವಗಡದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

Leopard suspicious death
ಚಿರತೆ ಅನುಮಾನಾಸ್ಪದ ಸಾವು

By

Published : Dec 2, 2019, 8:09 PM IST

Updated : Dec 2, 2019, 8:56 PM IST

ತುಮಕೂರು/ಪಾವಗಡ:ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದ ಕನ್ನಯ್ಯ ದೇವಾಲಯದ ಸಮೀಪದಲ್ಲಿ ಚಿರತೆಯೊಂದು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಯಾರೋ ಕಿಡಿಗೇಡಿಗಳು ಎರಡು ದಿನಗಳ ಹಿಂದೆಯೇ ಚಿರತೆಯನ್ನು ಕೊಂದಿದ್ದಾರೆ. ಕೊಂದ ಬಳಿಕ ತಂದು ಇಲ್ಲಿ ಹಾಕಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಚಿರತೆ ಅನುಮಾನಾಸ್ಪದ ಸಾವು

ಚಿರತೆಯ ನಾಲ್ಕು ಕಾಲುಗಳನ್ನು ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೆ, ಹಲ್ಲುಗಳನ್ನು ಕಿತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Last Updated : Dec 2, 2019, 8:56 PM IST

ABOUT THE AUTHOR

...view details