ಕರ್ನಾಟಕ

karnataka

ETV Bharat / city

ವಿದ್ಯುತ್ ಸ್ಪರ್ಶಿಸಿ ಜೂನಿಯರ್​ ರವಿಚಂದ್ರನ್ ಖ್ಯಾತಿಯ ಲಕ್ಷ್ಮೀನಾರಾಯಣ​ ಸಾವು - ಜೂನಿಯರ್ ರವಿಚಂದ್ರನ್ ಲಕ್ಷ್ಮೀನಾರಾಯಣ ನಿಧನ

ತುಮಕೂರು ಜಿಲ್ಲೆಯ ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಲಕ್ಷ್ಮೀನಾರಾಯಣ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ.

ಜೂನಿಯರ್ ರವಿಚಂದ್ರನ್
ಜೂನಿಯರ್ ರವಿಚಂದ್ರನ್

By

Published : May 10, 2022, 9:31 PM IST

Updated : May 10, 2022, 10:14 PM IST

ತುಮಕೂರು: ಜೂನಿಯರ್ ರವಿಚಂದ್ರನ್ ಎಂದೇ ಖ್ಯಾತಿ ಗಳಿಸಿದ್ದ ತುಮಕೂರು ಜಿಲ್ಲೆಯ ಲಕ್ಷ್ಮೀನಾರಾಯಣ ಅವರು ವಿದ್ಯುತ್ ಸ್ಪರ್ಶಿಸಿ ಕುಣಿಗಲ್ ತಾಲೂಕು ಹೇರೂರು ಗ್ರಾಮದಲ್ಲಿ ಮೃತಪಟ್ಟಿದ್ದಾರೆ.

35 ವರ್ಷ ವಯಸ್ಸಿನ ಲಕ್ಷ್ಮೀನಾರಾಯಣ ಮಂಗಳವಾರ ಸಂಜೆ ತಮ್ಮ ಮನೆಯ ಸಂಪಿಗೆ ನೀರು ತುಂಬಿಸಲು ಮೋಟಾರ್ ಸ್ವಿಚ್ಡ್​​​ ಆನ್ ಮಾಡಲು ಹೋದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿದೆ. ಇದರಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾಕಷ್ಟು ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಅನೇಕ ವರ್ಷಗಳಿಂದ ವಿವಿಧ ಆರ್ಕೆಸ್ಟ್ರಾಗಳಲ್ಲಿ ಜೂನಿಯರ್ ರವಿಚಂದ್ರನ್ ಆಗಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀನಾರಾಯಣ ಜಿಲ್ಲೆಯಲ್ಲದೇ ಹೊರ ಜಿಲ್ಲೆಗಳಲ್ಲಿಯೂ ಖ್ಯಾತಿಗಳಿಸಿದ್ದರು. ಈ ಘಟನೆ ಸಂಬಂಧ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ನಿರ್ಮಾಪಕನ ಕಚೇರಿ ಎದುರು ಮಹಿಳಾ ಜ್ಯೂನಿಯರ್​ ಆರ್ಟಿಸ್ಟ್​ ನಗ್ನ ಹೋರಾಟ!)

Last Updated : May 10, 2022, 10:14 PM IST

For All Latest Updates

TAGGED:

ABOUT THE AUTHOR

...view details