ಕರ್ನಾಟಕ

karnataka

ETV Bharat / city

ವಿವಾಹ ನೋಂದಣಿ ಮಾದರಿಯಲ್ಲೇ ಮತಾಂತರ ನೋಂದಣಿಗೆ ಚಿಂತನೆ: ಜೆ.ಸಿ ಮಾಧುಸ್ವಾಮಿ - belagavi session

ಮದುವೆ ನೋಂದಣಿ ಮಾಡುವಂತೆ ಮತಾಂತರ ನೋಂದಣಿ ಮಾಡಲಾಗುತ್ತದೆ. ಬಲವಂತ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವುದು ನಿಷೇಧ. ಅಂತವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಅನ್ನೋದು ಚರ್ಚೆಯಾಗಬೇಕಿದೆ. ಮತಾಂತರ ನಿಷೇಧ ಕಾಯ್ದೆ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

JC Madhuswamy
ಜೆ.ಸಿ ಮಾಧುಸ್ವಾಮಿ

By

Published : Dec 13, 2021, 12:29 PM IST

ತುಮಕೂರು: ಮತಾಂತರ ನಿಷೇಧ ಕಾಯ್ದೆ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಕಾಯ್ದೆ ಜಾರಿಗೆ ತರಲು ತೀರ್ಮಾನ ಆಗಿದೆ. ಮದುವೆ ನೋಂದಣಿ ಮಾಡುವಂತೆ ಮತಾಂತರ ನೋಂದಣಿ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಯ್ದೆ ರೂಪುರೇಷೆ ಬಗ್ಗೆ ತಿಳಿದುಕೊಳ್ಳಲು ನಾನು ಸಮಯ ಕೇಳಿದ್ದೇನೆ. ಯಾರಿಗೂ ನೋವು, ಅಡಚಣೆ ಆಗದ ರೀತಿಯಲ್ಲಿ ಕಾಯ್ದೆ ಜಾರಿ ಮಾಡಬೇಕು ಎಂದು ಯೋಚಿಸಿದ್ದೇನೆ ಎಂದರು.

ಮತಾಂತರ ನಿಷೇಧ ಕಾಯ್ದೆ ಈಗಾಗಲೇ ದೇಶದಲ್ಲಿ ಜಾರಿ ಇದೆ. ಬಲವಂತ ಹಾಗೂ ಆಮಿಷವೊಡ್ಡಿ ಮತಾಂತರ ಮಾಡುವುದು ನಿಷೇಧ. ಅಂತವರಿಗೆ ಯಾವ ರೀತಿಯ ಶಿಕ್ಷೆ ಕೊಡಬೇಕು ಅನ್ನೋದು ಚರ್ಚೆಯಾಗಬೇಕಿದೆ. ಈಗಿರುವ ಕಾನೂನಿನಲ್ಲಿ ಬಲವಂತದ ಮತಾಂತರ ಶಿಕ್ಷಾರ್ಹ ಅಪರಾಧ. ಸ್ವಯಂಪ್ರೇರಿತ ಮತಾಂತರಕ್ಕೂ ರೂಪುರೇಷೆ ಸಿದ್ಧಗೊಳಿಸುತ್ತೇವೆ ಎಂದು ತಿಳಿಸಿದರು.

ಚಿಕ್ಕನಾಯಕನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜೆ.ಸಿ ಮಾಧುಸ್ವಾಮಿ

ಮತಾಂತರ ಆಗುವವರು ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಯಾಗಲಿದೆ. ಬಲವಂತದ ಮತಾಂತರ ಅಲ್ಲವೆಂದು ತಿಳಿದ ಮೇಲೆ ಜಿಲ್ಲಾಧಿಕಾರಿಗಳು ಮತಾಂತರದ ಅರ್ಜಿ ಪುರಸ್ಕರಿಸಬಹುದು. ಸಂಘ ಸಂಸ್ಥೆಗಳು ನಾವು ಈ ವ್ಯಕ್ತಿಗಳನ್ನು ಕಾನೂನಿನಡಿ ಮತಾಂತರಗೊಳಿಸುತ್ತೇವೆ ಎಂದು ಅರ್ಜಿ ಸಲ್ಲಿಸಬಹದು. ಒಮ್ಮೆ ಮತಾಂತರಗೊಂಡ ವ್ಯಕ್ತಿ ಮೂಲ ಜಾತಿ,‌ ಧರ್ಮವನ್ನು ಕಳೆದುಕೊಳ್ಳುತ್ತಾನೆ ಎಂದು ಸಚಿವರು ಹೇಳಿದರು.

ಮದುವೆ ನೋಂದಣಿ ಮಾಡುವಂತೆ ಮತಾಂತರ ನೋಂದಣಿ ಮಾಡಲಾಗುತ್ತದೆ. ನೋಟಿಸ್ ಬೋರ್ಡ್​ಗೆ ಕೂಡ ಮತಾಂತರಗೊಂಡ ವ್ಯಕ್ತಿ ಹೆಸರು ಹಾಕಲಾಗುತ್ತದೆ. ಯಾವುದೇ ದೂರು ಆಕ್ಷೇಪ ಇಲ್ಲದಿದ್ದರೆ ಮತಾಂತರ ಪುರಸ್ಕಾರ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ವ್ಯಕ್ತಿ ಕ್ರಿಶ್ಚಿಯನ್​ಗೆ ಮತಾಂತರಗೊಂಡರೆ ಆತ ಅಲ್ಪ ಸಂಖ್ಯಾತ ಎಂದಾಗುತ್ತದೆ. ಆತನ ಮೂಲ ಜಾತಿ ಪ್ರಮಾಣಪತ್ರ ಬದಲಾಗುತ್ತದೆ. ಆದರೆ ಪರಿಶಿಷ್ಟ ಪಂಗಡದವರು ಮತಾಂತರಗೊಂಡರೆ ಅವರು ಮೂಲ ಜಾತಿಯ ಪ್ರಮಾಣ ಪತ್ರದಲ್ಲೇ ಮುಂದುವರೆಯುತ್ತಾರೆ ಎಂದರು.

ಪರಿಶಿಷ್ಟ ಪಂಗಡ ಅಂದ್ರೆ ಗುಡ್ಡಗಾಡಿನಲ್ಲಿ ಬದುಕುವ ಬುಡಕಟ್ಟು‌ ಜನಾಂಗ ಎಂದು‌ ಅರ್ಥ. ಹಾಗಾಗಿ, ಅವರು ಬುಡಕಟ್ಟು ಜನಾಂಗದಲ್ಲೇ ಇರುತ್ತಾರೆ. ಈ ಮಾದರಿಯ ಮತಾಂತರ ರೂಪುರೇಷೆಗಳನ್ನು ಜಾರಿಗೆ ತರಲು ಚಿಂತನೆ ನಡೆದಿದೆ ಎಂದು ಹೇಳಿದರು.

ABOUT THE AUTHOR

...view details