ತುಮಕೂರು : ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾದ ರಾಷ್ಟ್ರ ಲಾಂಛನದ ಚರ್ಚೆ ಬಗ್ಗೆ ಮಾತನಾಡಿದ ರಾಜ್ಯಸಭಾ ಸದಸ್ಯ ಜಗ್ಗೇಶ್, ಇಷ್ಟು ವರ್ಷ ಲಾಂಛನದ ಸಿಂಹದ ಬಾಯಿ ಮುಚ್ಚಿತ್ತು, ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ ಮತ್ತೇ ಘರ್ಜನೆ ಮಾಡುತ್ತಿದೆ. ಸುಖಾಸುಮ್ಮನೆ ಮೋದಿ ವಿರುದ್ದ ಮಾತಾಡುತ್ತಾರೆ ಎಂದರು.
ಇಷ್ಟು ವರ್ಷ ಲಾಂಛನದ ಸಿಂಹದ ಬಾಯಿ ಮುಚ್ಚಿತ್ತು, ಈಗ ಬಹಳ ಸ್ವಾಭಿಮಾನದಿಂದ ಬಾಯಿ ತೆರೆದಿದೆ: ಜಗ್ಗೇಶ್ - ಜಗ್ಗೇಶ್
ಸಾಮ್ರಾಟ ಅಶೋಕನ ಕಾಲದ ಲಾಂಛನವನ್ನೇ ಮಾಡಲಾಗಿದೆ. ಆರೋಪ ಮಾಡುವವರು ವಸ್ತು ಸಂಗ್ರಹಾಲಯದಲ್ಲಿರುವ ಲಾಂಛನ ನೋಡಲಿ ಎಂದು ಜಗ್ಗೇಶ್ ತುಮಕೂರಿನಲ್ಲಿ ಹೇಳಿದರು.
ಜಗ್ಗೇಶ್
ತುಮಕೂರಿನ ಸಿದ್ದಗಂಗಾ ಮಠಕ್ಕೆ ಗುರುಪೂರ್ಣಿಮೆಯ ಹಿನ್ನೆಲೆಯಲ್ಲಿ ಜಗ್ಗೇಶ್ ಮತ್ತು ಪತ್ನಿ ಪರಿಮಳಾ ಭೇಟಿ ನೀಡಿದರು. ಈ ವೇಳೆ, ಮಾತನಾಡಿದ ಅವರು, ಸೆಂಟ್ರಲ್ ವಿಸ್ತಾದಲ್ಲಿ ಮಾಡಿರುವ ಸಿಂಹ ಲಾಂಛನ ಮೂಲದಂತೆಯೇ ಇದೆ. ಸಾಮ್ರಾಟ ಅಶೋಕನ ಕಾಲದ ಲಾಂಛನ ಮ್ಯೂಸಿಯಂನಲ್ಲಿದೆ ಅದನ್ನು ನೋಡಿ ನಂತರ ಮಾತನಾಡಲಿ ಎಂದರು.
ಇದನ್ನೂ ಓದಿ :ಹೊಸ ಅಶೋಕ ಸ್ತಂಭದ ರೂವಾರಿ ವಾಸ್ತುಶಿಲ್ಪಿ ಲಕ್ಷ್ಮಣ್ ವ್ಯಾಸರ ಸಂದರ್ಶನ